ಪೊನ್ನಂಪೇಟೆ, ಮೇ ೧೪: ಭಾರೀ ಮಳೆಯಿಂದ ವೀರಾಜಪೇಟೆ-ಮೂರ್ನಾಡು ಮುಖ್ಯ ರಸ್ತೆಗೆ ಮರ ಬಿದ್ದು ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆಯಿತು.
ಇದೇ ವೇಳೆ ಪುತ್ತೂರಿನಿಂದ ತರಬೇತಿ ಮುಗಿಸಿಕೊಂಡು ಅದೇ ಮಾರ್ಗವಾಗಿ ಗೋಣಿಕೊಪ್ಪಲುವಿಗೆ ಹಿಂದಿರುಗುತ್ತಿದ್ದ ಕಾವೇರಿ ಕಾಲೇಜಿನ ಎನ್ಸಿಸಿ ಘಟಕದ ಕೆಡೆಟ್ಗಳು ತಕ್ಷಣ ಕಾರ್ಯಪ್ರವೃತ್ತರಾಗಿ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ಈ ಕಾರ್ಯಾಚರಣೆಗೆ ಎನ್ಸಿಸಿ ಅಧಿಕಾರಿಗಳಾದ ಡಾ. ಲೆಫ್ಟಿನೆಂಟ್ ಅಕ್ರಂ ಹಾಗೂ ಲೆಫ್ಟಿನೆಂಟ್ ಲೇಪಾಕ್ಷಿ ಅವರು ಮಾರ್ಗದರ್ಶನ ನೀಡಿದ್ದು, ಕೆಡೆಟ್ಗಳಾದ ಜಿತಿನ್, ರವಿಕುಮಾರ್, ಕಾರ್ತಿಕ್, ಆಮೀನ್, ಇಶಾನಿ, ಫ್ರಿನ್ಸಿ, ದೇಚಮ್ಮ, ಶ್ರೀನಿಧಿ, ವೈಷ್ಣವಿ, ಪ್ರದೀಪ್, ಸೋನಿಕಾ, ಮನೋಜ್ ಹಾಗೂ ಮಾಧವನ್ ಭಾಗವಹಿಸಿದ್ದರು.