ಮಡಿಕೇರಿ, ಮೇ ೧೪: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ಕೊಡಗು ಜಿಲ್ಲಾಮಟ್ಟದ ಎ ಡಿವಿಷÀನ್ ಫುಟ್ಬಾಲ್ ಲೀಗ್ ಪಂದ್ಯಾವಳಿಗೆ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಪಂದ್ಯಾವಳಿಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಕಾರ್ಯದರ್ಶಿ ನಾಗೇಶ್, ಜಿಲ್ಲಾಮಟ್ಟದ ಈ ಪಂದ್ಯಾವಳಿಯಲ್ಲಿ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ಆಶಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಉಪಾಧ್ಯಕ್ಷ ಕ್ರಿಸ್ಟೋಫರ್, ಖಜಾಂಜಿ ದೀಪು ಮಾಚಯ್ಯ, ರಾಜ್ಯ ಪ್ರತಿನಿಧಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಬ್ರಿಜೇಶ್, ಪಂದ್ಯಾಟದ ನಿರ್ದೇಶಕ ಅರುಣ, ತೀರ್ಪುಗಾರರ ಉಸ್ತುವಾರಿ ದರ್ಶನ್ ಸೇರಿದಂತೆ ಹಲವರು ಹಾಜರಿದ್ದರು.
ಉದ್ಘಾಟನಾ ಪಂದ್ಯ ವೈಷ್ಣವಿ ಮರಗೋಡು ಮತ್ತು ಮಿಲನ್ಸ್ ಅಮ್ಮತ್ತಿ ತಂಡಗಳ ಮಧ್ಯೆ ನಡೆದು ೧-೧ ಗೋಲುಗಳಿಂದ ಡ್ರಾ ಆಯಿತು.
ಫಲಿತಾಂಶ
ಎನ್‌ವೈಸಿಎಫ್‌ಸಿ ವಿರುದ್ಧ ಎಸ್‌ಆರ್‌ವಿ ತಂಡಕ್ಕೆ ೮-೦ ಗೋಲುಗಳ ಗೆಲುವು ಲಭಿಸಿತು. ಎಂಸಿಸಿ ವಿರುದ್ಧ ಐಎನ್‌ಎಸ್‌ಗೆ ೨-೦ ಗೆಲುವು ದೊರೆಯಿತು. ಬಿವೈಸಿ ಹಾಲುಗುಂದ ವಿರುದ್ಧ ಸಹಾರಾ ಎಫ್ ೫-೧ ಗೋಲುಗಳ ಗೆಲುವು ಸಾಧಿಸಿತು. ಎನ್‌ವೈಸಿಎಫ್‌ಸಿ ವಿರುದ್ಧ ವೈಷ್ಣವಿ ಎಫ್ ಎಫ್ ಸಿ ಗೆ ೪-೧ ಗೆಲುವು ಲಭಿಸಿತು. ಮಿಲನ್ಸ್ ವಿರುದ್ಧ ಎಸ್‌ಆರ್‌ವಿ ತಂಡ ೨-೦ ಗೋಲುಗಳ ಗೆಲುವು ಸಾಧಿಸಿತು. ಐಎನ್‌ಎಸ್‌ಗೆ ಸಹಾರ ತಂಡದ ವಿರುದ್ಧ ೧-೦ ಅಂತರದ ಗೆಲುವು ಲಭಿಸಿತು.