ನಾಪೋಕ್ಲು, ಮೇ ೧೬: ಇಲ್ಲಿಗೆ ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನವಾದ ಶನಿವಾರ ಪೂಜಾ ವಿಧಿ ವಿಧಾನಗಳು ಜರುಗಿದವು .
ನೀಲೇಶ್ವರ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ಪ್ರಾರಂಭಗೊAಡ ಹೋಮ ಹವನಗಳು ಮುಂದುವರೆದ ಭಾಗವಾಗಿ ಶನಿವಾರ ಬೆಳಿಗ್ಗೆ ೭ಗಂಟೆಯಿAದ ಗಣಪತಿ ಹೋಮ , ಅಂಕುರ ಪೂಜೆ , ತತ್ವ ಹೋಮ , ತತ್ವ ಕಲಶ ಪೂಜೆ , ತತ್ವ
ಕಲಶಾಭಿಷೇಕ, ಮಧ್ಯಾಹ್ನ ಪೂಜಾ ಮಂಟಪ ನಮಸ್ಕಾರ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಹಾಗೂ ರಾತ್ರಿ ಅಂಕುರ ಪೂಜೆ ದುರ್ಗಾ ನಮಸ್ಕಾರ ಪೂಜೆ ಜರುಗಿತು.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಹಾಲಿ , ಮಾಜಿ ಪದಾಧಿಕಾರಿ ಹಾಗೂ ಸದಸ್ಯರು, ಭಕ್ತ ಜನ ಸಂಘದ ಅಧ್ಯಕ್ಷ ಸುಮನ್ ಸುಬ್ರಮಣಿ ಹಾಲಿ , ಮಾಜಿ ಪದಾಧಿಕಾರಿ ಹಾಗೂ ಸದಸ್ಯರು, ಭಕ್ತಾದಿಗಳು ಭಾಗವಹಿಸಿದ್ದರು.
ತಾ.೧೭ ರಂದು (ಇಂದು) ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ ಅಂಕುರ ಪೂಜೆ ಅನುಜ್ಞಾ ಕಲಶ ಪೂಜೆ, ಆದಿವಾಸ ಹೋಮ, ಪರಿಕಲಶ ಪೂಜೆ, ಬ್ರಹ್ಮ ಕಳಸ ಪೂಜೆ, ಕಲಶಾದಿವಾಸ ಸೇರಿದಂತೆ ವಿವಿಧ ಪೂಜೆಗಳು, ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಹಾಗೂ ರಾತ್ರಿ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.
- ದುಗ್ಗಳ ಸದಾನಂದ