ಮಡಿಕೇರಿ, ಮೇ ೧೬: ಮಡಿಕೇರಿ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾ.೨೦ ರಂದು ಕಡಂಗ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಮಡಿಕೇರಿ ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರು ಮಾಹಿತಿ ನೀಡಿದರು.

ಈ ಬಗ್ಗೆ ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಹಾಗೂ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಅವರು, ಈ ಬಾರಿ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಲಿದ್ದಾರೆ. ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಎಂ.ಪಿ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ ಬೋಪಯ್ಯ, ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ ಕೇಶವ್ ಕಾಮತ್, ಕಸಾಪ ಮಡಿಕೇರಿ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ ೮ ಗಂಟೆಗೆ ದಿ. ಪಾಂಡAಡ ಕುಟ್ಟಣಿ ಸಭಾ ಮಂಟಪದ ಮುಂಭಾಗ ಕಸಾಪ ಹಣಕಾಸು ಸಮಿತಿ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಅವರು ರಾಷ್ಟç ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಕೇಶವ್ ಕಾಮತ್ ಅವರು ಕಸಾಪ ಧ್ವಜಾರೋಹಣ ಮಾಡಲಿದ್ದಾರೆ. ಕನ್ನಡ ಧ್ವಜಾರೋಹಣವನ್ನು ಮಡಿಕೇರಿ ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಅವರು ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೆ. ೮:೩೦ಕ್ಕೆ ಏಕಕಾಲಕ್ಕೆ ೧೧ ನೆನಪಿನ ದ್ವಾರಗಳ ಉದ್ಘಾಟನೆ ನೆರವೇರಲಿದೆ.ಕುಲ್ಲಚಂಡ ದಿ ಲಾಲು ಮೇದಯ್ಯ ಮತ್ತು ದಿ. ದೇವಕ್ಕ ನೆನಪಿನ ಪ್ರವೇಶ ದ್ವಾರ, ದೇಯಿರ ಕುಟುಂಬಸ್ಥರ ನೆನಪಿನ ಪ್ರವೇಶ ದ್ವಾರ, ಮೇದುರ ದಿ. ನಂಜಪ್ಪ ಹಾಗೂ ದಿ ಸೀತಮ್ಮ ನೆನಪಿನ ಪ್ರವೇಶ ದ್ವಾರ, ಕೋಡಿರ ದಿ. ಮುತ್ತಣ್ಣ ಹಾಗೂ ದಿ ಸುನಂದಿ ಮುತ್ತಣ್ಣ ನೆನಪಿನ ಪ್ರವೇಶ ದ್ವಾರ, ಚಲ್ಮಂಡ ದಿ. ಸುಬ್ಬಯ್ಯ ಹಾಗೂ ದಿ ಕಾಮವ್ವ ನೆನಪಿನ ಪ್ರವೇಶ ದ್ವಾರ, ನಂಬಿಯಪAಡ ದಿ. ಅಪ್ಪಣ್ಣ ಹಾಗೂ ದಿ ಕಾಮವ್ವ ನೆನಪಿನ ಪ್ರವೇಶ ದ್ವಾರ, ಮುಕ್ಕಾಟಿರ ದಿ. ಚಂಗಪ್ಪ ಹಾಗೂ ದಿ ಕಾಂಜವ್ವ ನೆನಪಿನ ಪ್ರವೇಶ ದ್ವಾರ, ಅನ್ನಂಬಿರ ದಿ. ತಮ್ಮಯ್ಯ ನೆನಪಿನ ಪ್ರವೇಶ ದ್ವಾರ, ಅನ್ನಂಬಿರ ದಿ ಉತ್ತಪ್ಪ ಹಾಗೂ ದಿ ಪಾರ್ವತಿ ನೆನಪಿನ ಪ್ರವೇಶ ದ್ವಾರ, ದಿ. ಪಾಲಚಂಡ ಮಿಟ್ಟು ಕಾವೇರಪ್ಪ ಹಾಗೂ ದಿ ಬೋಜಕ್ಕಿ ನೆನಪಿನ ಪ್ರವೇಶ ದ್ವಾರಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬಳಿಕ ವಿವಿಧ ಕಲಾತಂಡಗಳ ಉದ್ಘಾಟನೆ, ನೆರವೇರಲಿದೆ. ಬಳಿಕ ಮುಖ್ಯ ದ್ವಾರ, ಪುಸ್ತಕ ಮಳಿಗೆ, ಸ್ತಿçà ಶಕ್ತಿ ಮಳಿಗೆ, ಸಭಾಂಗಣ ಮತ್ತು ವೇದಿಕೆ ಉದ್ಘಾಟನೆ ನೆರವೇರಲಿದೆ.

ಸಭಾ ಕಾರ್ಯಕ್ರಮ

ಬೆಳಿಗ್ಗೆ ೧೦:೩೦ರಿಂದ ಮಧ್ಯಾಹ್ನ ೧ ಗಂಟೆವರೆಗೆ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಸಮ್ಮೇಳನಾಧ್ಯಕ್ಷ ರಮೇಶ್ ಉತ್ತಪ್ಪ ಅಧ್ಯಕ್ಷತೆÀಯಲ್ಲಿ ನೆರವೇರಲಿದೆ. ಉದ್ಘಾಟನೆಯನ್ನು ಶಾಸಕರಾದ ಎ.ಎಸ್ ಪೊನ್ನಣ್ಣ ನೆರವೇರಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ತಂಬAಡ ವಿಜಯ್ ಪೂಣಚ್ಚ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಶಾಸಕರಾದ ಡಾ ಮಂತರ್ ಗೌಡ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ನಂತರ ಪತ್ರಕರ್ತ ಅಶ್ರಫ್ ಕಡಂಗ ರಚಿತ ಪುಸ್ತಕ ಬಿಡುಗಡೆ ನೆರವೇರಲಿದೆ.

ಮಧ್ಯಾಹ್ನ ೧ ರಿಂದ ೨ ಗಂಟೆವರೆಗೆ ಕನ್ನಡ ಗೀತ ಗಾಯನ ಕಾರ್ಯಕ್ರಮ ನೆರವೇರಲಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ೨ ರಿಂದ ೩ ಗಂಟೆವರೆಗೆ ವಿಚಾರಗೋಷ್ಠಿ ನಡೆಯಲಿದ್ದು, ಸಾಹಿತಿ ಕಿಗ್ಗಾಲು ಗಿರೀಶ್ ಇದರ ಅಧ್ಯಕ್ಷತೆ ವಹಿಸಲಿದ್ದಾರೆ. ೩ ಗಂಟೆಯಿAದ ೩:೩೦ ವರೆಗೆ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ಮಾರುತಿ ದಾಸಣ್ಣನವರ್ ಅಧ್ಯಕ್ಷತೆ ವಹಿಸಲಿದ್ದಾರೆ. ೩:೩೦ ರಿಂದ ೪ ಗಂಟೆವರೆಗೆ ಕಡ್ಲೇರ ತುಳಸಿ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ ೪ ರಿಂದ ೫ ಗಂಟೆಯವರೆಗೆ ಸಾಹಿತಿ ನಾಗೇಶ್ ಕಾಲೂರು ಅಧ್ಯಕ್ಷತೆಯಲ್ಲಿ ಸಾಧಕರಿಗೆ ಸನ್ಮಾನ ನಡೆಯಲಿದೆ. ಸಂಜೆ ೫ ರಿಂದ ೬ ಗಂಟೆಯವರೆಗೆ ಸಮಾರೋಪ ಸಮಾರಂಭ ನೆರವೇರಲಿದೆ. ಸಂಜೆ ೬ ಗಂಟೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಉದ್ಘಾಟನೆಯನ್ನು ಮಡಿಕೇರಿ ತಹಶೀಲ್ದಾರರಾದ ಆರ್ ಶ್ರೀಧರ್ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಪೆಮ್ಮಂಡ ಕೌಶಿ ಕಾವೇರಮ್ಮ, ಮಡಿಕೇರಿ ಕಸಾಪ ಕಾರ್ಯದರ್ಶಿ ಮೂಟೆರ ಲಕ್ಷÄ ಸೋಮಣ್ಣ ಹಾಗೂ ಸಮ್ಮೇಳನದ ಆಹಾರ ಮತ್ತು ವೇದಿಕೆ ಸಮಿತಿಯ ಅಚ್ಚಾಂಡಿರ ತಾರಾ ಉದಯ ಅವರುಗಳು ಹಾಜರಿದ್ದರು.