ಗೋಣಿಕೊಪ್ಪ ವರದಿ, ಮೇ. ೧೬: ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಹಾಗೂ ಪೊಳಕರಾಂಡಿ ಕುಟುಂಬದ ಸಹಯೋಗದಲ್ಲಿ ತಾ.೧೮ ಮತ್ತು ೧೯ ರಂದು ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪೊಳಕರಾಂಡಿ ಕ್ರಿಕೆಟ್ ಕಪ್ ನಡೆಯಲಿದೆ.

ಮಲಬಾರ್ ಮುಸ್ಲಿಂ ಅಸೋಸಿಯೆಷನ್‌ಗೆ ಒಳಪಡುವ ಮುಸ್ಲಿಂ ಕುಟುಂಬಗಳಾದ ಪೊಳಕರಾಂಡಿ, ಕುಂಬಳಕAಡಿ, ಮುಸ್ಲಿಯಾರ್ ಅಗತ್, ಪುದುಪರಂಬಿಲ್, ಚೂರಿಯೋಡ್, ಕೇರಿಪರಂಬ್, ಚಿತ್ತಾಕೂಲ್, ಹರಕಾಟಿಲ್, ಮಾರ್ಗರ, ಚಕ್ಕಿಯಾಟ್, ಆಲಿಂಗಲ್, ಚೆರಿಯಾಂಡಿ ತಂಡಗಳು ಸೇರಿದಂತೆ ಒಟ್ಟು ೧೨ ಕುಟುಂಬ ತಂಡಗಳು ಭಾಗವಹಿಸುತ್ತಿವೆ.

ಬೆಳಿಗ್ಗೆ ೧೦.೩೦ ಗಂಟೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಉದ್ಘಾಟಿಸಲಿದ್ದಾರೆ. ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಗೌರವ ಅಧ್ಯಕ್ಷ ಪಿ.ಎ. ಅಜೀಜ್, ಪೊಳಕರಾಂಡಿ ಕುಟುಂಬದ ಅಧ್ಯಕ್ಷ ಪಿ. ಎ. ಮುಸ್ತಫಾ, ಕಾರ್ಯದರ್ಶಿ ಪಿ. ಎ. ಉಮರ್ ಭಾಗವಹಿಸಲಿದ್ದಾರೆ.

ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಕೆ. ಎಂ. ಫೈಜಲ್ , ಉಪಾಧ್ಯಕ್ಷ ಎಂ. ಎ. ಅಶ್ರಫ್, ಕಾರ್ಯದರ್ಶಿ ಸಿ. ಎ. ಜುನೈದ್, ಖಜಾಂಚಿ ಸಿ. ಎ. ಸಜೀರ್ ಸದಸ್ಯರುಗಳು ಹಾಜರಿರುತ್ತಾರೆ. ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾರ ಎ. ಎಸ್. ಪೊನ್ನಣ್ಣ ಲೋಗೋ ಅನಾವರಣಗೊಳಿಸಿ ಶುಭ ಕೋರಿದರು.