ಚೆಯ್ಯಂಡಾಣೆ, ಮೇ.೧೮: ಎನ್ಇಇಟಿ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಶಾಶ್ವತ ಪರಿಹಾರವನ್ನು ಸಂಬAಧಪಟ್ಟ ಇಲಾಖೆ ನೀಡಬೇಕು ಎಂದು ಎಸ್.ಎಸ್.ಎಫ್ ಒತ್ತಾಯಿಸಿದೆ.
ಎಸ್.ಎಸ್.ಎಫ್ ವೀರಾಜಪೇಟೆ ಡಿವಿಷನ್ ಸಮಿತಿ ಆಯೋಜಿಸಿದ್ದ ಎನ್ಇಇಟಿ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಎಸ್.ಎಸ್.ಎಫ್ ವೀರಾಜಪೇಟೆ ಡಿವಿಷನ್ ಮಾಧ್ಯಮ ಕಾರ್ಯದರ್ಶಿ ತೌಸೀಫ್ ಅಮ್ಮತ್ತಿ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಗಳ ವಿರುದ್ಧ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು ಹಾಗೂ ಮುಂದೆ ಪ್ರಶ್ನೆ ಪತ್ರಿಕೆಗಳ ಸೋರಿಕೆ ಆಗದಂತೆ ಶಾಶ್ವತ ಪರಿಹಾರವನ್ನು ಪರೀಕ್ಷಾ ಮಂಡಳಿ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯಾದ್ಯಂತ ಏಕಕಾಲದಲ್ಲಿ ಡಿವಿಷನ್ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ವೀರಾಜಪೇಟೆ ಡಿವಿಷನ್ ಸಮಿತಿ ವೀರಾಜಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟಣೆ ನಡೆಸಿತು.
ಪ್ರತಿಭಟನೆಯಲ್ಲಿ ವಿರಾಜಪೇಟೆ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶಫೀಕ್, ಪ್ರಮುಖರಾದ ಶಫೀರ್, ನಿಝಾಮ್ ಅನ್ವಾರಿ, ನೌಫಲ್ ಅನ್ವಾರಿ, ಸುಪಿಯಾನ್ ರಝಾ, ಜುನೈದ್, ಸಯ್ಯಿದ್ ರಶೀದ್, ಹಾಫಿಜ್ ಇಸ್ಮಾಯಿಲ್, ಶಾಹುಲ್ ಅನ್ವಾರಿ, ವಿದ್ಯಾರ್ಥಿಗಳು ಹಾಗೂ ಎಸ್.ಎಸ್.ಎಫ್ ಕಾರ್ಯಕರ್ತರು ಇದ್ದರು.