ಚೆಯ್ಯಂಡಾಣೆ, ಮೇ ೨೦ : ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ನೆಲ್ಯಾಹುದಿಕೇರಿಯಲ್ಲಿ ನಡೆಯಿತು.
ನೆಲ್ಲಿಹುದಿಕೇರಿ ದಾರುನ್ನಜಾತ್ ಸಭಾಂಗಣದಲ್ಲಿ ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮುನೀರ್ ಮಹ್ಳರಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯನ್ನು ಎಸ್ ವೈಎಸ್ ರಾಜ್ಯ ಸಮಿತಿಯ ಪ್ರಮುಖ ಅಹ್ಮದ್ ಮದನಿ ಉದ್ಘಾಟಿಸಿ ಮಾತನಾಡಿದರು.
ವೀಕ್ಷಕರಾಗಿ ಆಗಮಿಸಿದ ಕರ್ನಾಟಕ ರಾಜ್ಯ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯನ್ನು ಯೂನಿಟ್ ಮಟ್ಟದಿಂದಲೇ ಬಲಪಡಿಸ ಬೇಕು ಕೊಡಗು ಜಿಲ್ಲಾ ಸಮಿತಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದಲ್ಲಿ ಮಾದರಿ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕಳೆದ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ಲೆಕ್ಕ ಪತ್ರವನ್ನು ಕೋಶಾಧಿಕಾರಿ ಶರೀಫ್ ಮಾಸ್ಟರ್ ಹೊಸತೋಟ ಸಭೆಯಲ್ಲಿ ಮಂಡಿಸಿದರು. ನಂತರ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ದಅವಾ ಕಾರ್ಯದರ್ಶಿ ಶಂಸುದ್ದಿನ್ ಅಮ್ಜದಿ ಬಲಮುರಿ ಹಾಗೂ ಮಾಧ್ಯಮ ಕಾರ್ಯದರ್ಶಿ ಅಶ್ರಫ್ ಸಿ.ಎ. ಕಡಂಗರವರನ್ನು ರಾಜ್ಯ ನಾಯಕರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು. ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯು ಹೊರತಂದಿರುವ ವೆಬ್‌ಸೈಟನ್ನು ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಲೋಕಾರ್ಪಣೆ ಮಾಡಿದರು. ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್, ಸಯ್ಯಿದ್ ಮಹ್ದಿ ಅಹ್ಮದ್ ಲಕ್ಷದ್ವೀಪ್, ಮಾಜಿ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಸಯ್ಯಿದ್ ಸೈಫುದ್ದಿನ್ ತಂಙಳ್, ರಾಜ್ಯ ಸಮಿತಿಯ ಸದಸ್ಯ ಅಶ್ರಫ್ ಎಮ್ಮೆಮಾಡು ಮತ್ತಿತರರು ಉಪಸ್ಥಿತರಿದ್ದರು. ಸಯ್ಯಿದ್ ಮಹ್ದಿ ಅಹ್ಮದ್ ಅಲ್ ಬುಖಾರಿ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಸ್ವಾಗತಿಸಿ, ಶಿಹಾಬ್ ಲತೀಫಿ ವಂದಿಸಿದರು.