ಕಡಂಗ, ಮೇ ೨೦ : ೧೧ನೇ ವರ್ಷದ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟವು ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆ ಪಿ ಎಲ್ ೧೧ನೇ ಆವೃತ್ತಿಯ ಅಧ್ಯಕ್ಷ ರಹೀಂ ಟಿ.ಎಂ. ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಬೀರ್ ಮಾತನಾಡಿ ಕ್ರೀಡೆಯಲ್ಲಿ ಸೋಲು ಮತ್ತು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿರಣ್ ಕಾರ್ಯಪ್ಪ ಮಾತನಾಡಿ ಕಡಂಗ ಭಾಗದಲ್ಲಿ ಕ್ರೀಡಾಕೂಟಗಳು ಹೆಚ್ಚುತ್ತಿದ್ದು ಯುವ ಪ್ರತಿಭೆಗಳನ್ನು ಗುರುತಿಸುವಂತಾಗಲಿ ಎಂದರು.

ಕ್ರೀಡಾಕೂಟದ ವಿವರ : ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ವೆಸ್ಟೆರ್ನ್ ಕಾಫಿ ತಂಡವನ್ನು ಮಣಿಸಿ ಬಿ ವೈ ಸಿ ಸಿ ತಂಡ ಫೈನಲ್ ಪ್ರವೇಶಿಸಿತು. ೨ನೇ ಕ್ವಾಲಿಫಯರ್ ಪಂದ್ಯದಲ್ಲಿ ಆರ್ ಸಿ ಬಿ ತಂಡವನ್ನು ಗನ್ನರ್ಸ್ ಮಣಿಸಿತು.

ಎಲಿಮಿನೇಟರ್ಸ್ ಪಂದ್ಯದಲ್ಲಿ ಗನ್ನರ್ಸ್ ತಂಡವನ್ನು ಮಣಿಸಿ ವೆಸ್ಟರ್ನ್ ಕಾಫಿ ತಂಡ ಫೈನಲ್ ಹಂತಕ್ಕೆ ಪ್ರವೇಶಿಸಿತು. ಫೈನಲ್ ಪಂದ್ಯಾವಳಿಯಲ್ಲಿ ವೆಸ್ಟೆರ್ನ್ ಕಾಫಿ ತಂಡವು ಬಿ ವೈ ಸಿ ಸಿ ತಂಡವನ್ನು ಮಣಿಸಿ ಕೆಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಫೈನಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಹರ್ಷಿತ್ ಪಡೆದುಕೊಂಡರು, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆರ್ ಸಿ ಬಿ ತಂಡದ ನೌಶಾದ್, ಉತ್ತಮ ಬಾಲರ್ ಪ್ರಶಸ್ತಿಯನ್ನು ನಂಜಪ್ಪ ಪಡೆದುಕೊಂಡರು, ಉತ್ತಮ ತಂಡ ಪ್ರಶಸ್ತಿಯನ್ನು ರೈಸಿಂಗ್ ಸ್ಟಾರ್ ತಂಡ ಪಡೆದುಕೊಂಡಿತು. ಅತ್ಯಧಿಕ ಕ್ಯಾಚ್ ಪಡೆದ ಪ್ರಶಸ್ತಿಯನ್ನು ಜುನೈದ್ ಕೆ.ಎಂ., ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗಗನ್ ಪಡೆದುಕೊಂಡರು. ಕ್ರೀಡಾಕೂಟದ ಸ್ಕೊರ್‌ರಾಗಿ ರಾಜಿಕ್ ಎಬಿಆರ್, ತೀರ್ಪುಗಾರರಾಗಿ ಹನೀಫ್ ಪಿರಿಯಾಪಟ್ಟಣ, ಬಾನು ಪ್ರಿಯಾ ಮೈಸೂರು ಕಾರ್ಯನಿರ್ವಹಿಸಿದರು.

ಈ ಸಂದÀರ್ಭ ಉನ್ನತ ಅಂಕಗಳೊAದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಆಯೋಜಕರ ವತಿಯಿಂದ ಸನ್ಮಾನಿಸಲಾಯಿತು

ವೇದಿಕೆಯಲ್ಲಿ ಜವiಅತ್ ಅಧ್ಯಕ್ಷ ಅಬ್ದುಲ್ಲಾ, ಜುನೈದ್ ಸಿ.ಎ., ಅಬೂಬಕರ್ ಎಂ.ಎA., ಗಗನ್, ರಜಾಕ್ ಪಿ. ಇ., ಇಕ್ಬಾಲ್, ಸಲಾಂ, ಸಿದ್ದಿಕ್, ಸಲಾಂ ಆರ್ಮಿ , ಸಮದ್, ಆಶ್ರಫ್ ಬ್ಯಾಂಕ್, ಕುಂಜಿ ಅಹಮದ್, ನಸೀರ್, ಆಯೋಜಕರಾದ ಅಷ್ಕರ್, ಶಮೀರ್, ಅಶ್ರಫ್, ಯುನಸ್, ಬಸೀರ್ ಉಪಸ್ಥಿತರಿದ್ದರು. ರೋಷನ್ ಹೆಗ್ಗಳ ನಿರೂಪಿಸಿದರು.