ಗೋಣಿಕೊಪ್ಪಲು, ಮೇ ೨೧: ಪೊನ್ನಂಪೇಟೆ ತಾಲೂಕಿನ ಈಚೂರು ಕುಂದ ಸಹಕಾರ ದವಸ ಭಂಡಾರದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಸÀಂಘದ ಕಚೇರಿಯಲ್ಲಿ ನಡೆಯಿತು.
೫ ವರ್ಷಗಳ ಅವಧಿಯ ಚುನಾವಣೆಯಲ್ಲಿ ೩ನೇ ಅವಧಿಗೆ ಅಧ್ಯಕ್ಷರಾಗಿ ಗುಮ್ಮಟ್ಟಿರ ಕಿಲನ್ ಗಣಪತಿ ಅವಿರೋಧವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಪಟ್ರಂಗಡ ಎಸ್.ದನಿ ಗಂಗಮ್ಮ ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಗೊಂಡ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಮಾಡಿದ ನಿಸ್ವಾರ್ಥ ಸೇವೆಗೆ ಆಡಳಿತ ಮಂಡಳಿ ಹಾಗೂ ಗ್ರಾಮದ ಸಂಘದ ಸದಸ್ಯರುಗಳು ತನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಸಹಕಾರಿ ಕ್ಷೇತ್ರ ಉಳಿದರಷ್ಟೆ ರೈತ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ರೈತರು ಭತ್ತದ ಕೃಷಿಗೆ ಮೊದಲ ಆದ್ಯತೆ ನೀಡುವಂತಾಗಬೇಕು ಎಂದರು.
ಮುAದಿನ ಅವಧಿಯಲ್ಲಿ ಸಂಘದ ಬೆಳವಣಿಗೆಗೆ ಪೂರಕವಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ. ಸದಸ್ಯರುಗಳ ಹಿತ ಕಾಪಾಡುವ ಮೂಲಕ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ. ಗ್ರಾಮೀಣ ಭಾಗದಲ್ಲಿ ಸಂಘದ ಸದಸ್ಯರುಗಳು ತಮ್ಮ ಭತ್ತದ ಭೂಮಿಗಳನ್ನು ನೆಡುವ ಮೂಲಕ ಭತ್ತದ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಬೇಕು. ಇದರಿಂದ ಅಂರ್ತಜಲ ಕಾಪಾಡಬಹುದು. ಭತ್ತ ಬೆಳೆಯುವ ರೈತರಿಗೆ ಸಂಘದಿAದ ಸಹಕಾರ ನೀಡಬಹುದು ಈ ನಿಟ್ಟಿನಲ್ಲಿ ಭತ್ತದ ಗದ್ದೆಗಳನ್ನು ಪಾಳು ಬಿಡದಂತೆ ಎಚ್ಚರ ವಹಿಸಿ ಮುಂದಿನ ಸಾಲಿನಿಂದ ಭತ್ತದ ಕೃಷಿಗೆ ವಿಶೇಷ ಆಸಕ್ತಿ ವಹಿಸುವಂತೆ ರೈತರಲ್ಲಿ ಮನವಿ ಮಾಡಿದರು.
ಸಂಘದ ಹಿರಿಯ ಸದಸ್ಯರಾಗಿ ಕಳೆದ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನೆರವಂಡ ಎಸ್.ಗಣಪತಿ ಅವರು ಈ ಬಾರಿ ಮಹಿಳೆಗೆ ಅವಕಾಶ ಕಲ್ಪಿಸುವ ಮೂಲಕ ಶೇ.೩೩ರ ಮೀಸಲಾತಿ ಅನುಷ್ಠಾನಗೊಳಿಸಿದ್ದಾರೆ. ತಮ್ಮ ಸ್ವ ಇಚ್ಚೆಯಿಂದ ಉಪಾಧ್ಯಕ್ಷ ಸ್ಥಾನವನ್ನು ಮಹಿಳೆಗೆ ಬಿಟ್ಟು ಕೊಡುವ ಮೂಲಕ ಮಹಿಳಾ ಅಭ್ಯರ್ಥಿಯನ್ನು ಉಪಾಧ್ಯಕ್ಷರನ್ನಾಗಿ ಸೂಚಿಸಿದರು.
ನಿರ್ದೇಶಕರುಗಳಾದ ತೀತಮಾಡ ಎಸ್.ಗಣಪತಿ, ತೀತಮಾಡ ಡಿ.ಉತ್ತಪ್ಪ, ತೀತಮಾಡ ಎಂ.ಉತ್ತಪ್ಪ, ಮದ್ರಿರ ಎ.ರವೀಂದ್ರ, ತೀತಮಾಡ ಪಿ.ತಿಮ್ಮಯ್ಯ, ನೆರವಂಡ ಎಸ್. ಗಣಪತಿ, ತಾತೀರ ಜಿ. ಸೌಮ್ಯ, ಸುಮಿತ್ರಾ ಜಿ. ಹೆಚ್.ಎಸ್. ಹ್ಯಾರಿ, ಗುಮ್ಮಟ್ಟಿರ ಜಿ. ಚಂಗಪ್ಪ ಹಾಜರಿದ್ದರು. ಚುನಾವಣಾಧಿಕಾರಿಯಾಗಿ ಕೆ.ಯು.ಕರುಣ್ ಕಾರ್ಯಪ್ಪ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಮದ್ರಿರ ವಿ.ಹರೀಶ್ ಕಾರ್ಯ ನಿರ್ವಹಿಸಿದರು.