ನಾಪೋಕ್ಲು, ಮೇ ೨೧: ಇಲ್ಲಿಗೆ ಸಮೀಪದ ಸಣ್ಣಪುಲಿಕೋಟು ಗ್ರಾಮದ ಕುಯ್ಯಮುಡಿ ಕಡವಡಿ ಕುಟುಂಬಸ್ಥರಿAದ ಎರಡು ವರ್ಷಕ್ಕೆ ಒಮ್ಮೆ ನಡೆಯುವ ವಿಷ್ಣುಮೂರ್ತಿ ಹಾಗೂ ಸಹ ಪರಿವಾರಗಳ ದೈವಕೋಲ ಮಹೋತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.
ಉತ್ಸವದ ದಿನ ಬೆಳಿಗ್ಗೆ ೬ ಗಂಟೆಗೆ ಕುಯ್ಯಮುಡಿ ದೊಡ್ಡ ಮನೆಯಿಂದ ಸಂಪ್ರದಾಯದAತೆ ಬಂಡಾರ ತರಲಾಯಿತು. ಬಳಿಕ ವಿಷ್ಣುಮೂರ್ತಿ ದೈವದ ಬೊಳ್ಳಾಟಂ, ರಾತ್ರಿ ಕುಟ್ಟಿಚಾತನ್, ಕಾಲಭೈರವ, ಮಂದನ ಮೂರ್ತಿ ಹಾಗೂ ಸಹ ಪರಿವಾರಗಳ ಕೋಲ ಜರುಗಿತು. ಮರುದಿನ ಭೂಮಿ ಗುಳಿಗ, ರಾಹು, ಗುಳಿಗ ಕೋಲ ಹಾಗೂ ವಿಷ್ಣುಮೂರ್ತಿ ಮೇಲೇರಿ ಜರುಗಿದವು. ಈ ಸಂದರ್ಭ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಸಂಜೆ ವಿಷ್ಣುಮೂರ್ತಿ ಬಾರಣೆ ಕಾರ್ಯಕ್ರಮ ಜರುಗಿತು.
ಉತ್ಸವದಲ್ಲಿ ಕಡವಡಿ ಕುಟುಂಬದ ಅಧ್ಯಕ್ಷ ಚರಣ್ ಕುಮಾರ್ (ಲವ), ಗೌರವಾಧ್ಯಕ್ಷ ಪೂರ್ಣಯ್ಯ, ಪ್ರಧಾನ ಅರ್ಚಕ ಶ್ರೀನಿವಾಸ್ (ಪುಟ್ಟು), ಆಡಳಿತ ಮಂಡಳಿ ಸದಸ್ಯರು, ಭಕ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಹರಕೆ ಸೇವೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು.