ಮಡಿಕೇರಿ, ಮೇ.೨೧: ವಿಜ್ಞಾನ ಆಧಾರಿತ ಪೋಷಕಾಂಶ ಮತ್ತು ಇತರ ಪರಿಕರಗಳ ಅಳವಡಿಕೆಯ ಜಾಗೃತಿ ಅಭಿಯಾನದ ಅಂಗವಾಗಿ ದೊಡ್ಡತೋಳೂರು ಗ್ರಾಮದಲ್ಲಿ ಅಪ್ಪಂಗಳದಲ್ಲಿರುವ ಐ.ಸಿ.ಎ.ಆರ್-(ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ) ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳ ತಂಡವು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮವು ವಿಶೇಷವಾಗಿ ಕಾಳು ಮೆಣಸು ಬೆಳೆಯ ಉತ್ಪಾದಕತೆಯನ್ನು ಹೆಚ್ಚಿಸಲು ಶಾಶ್ವತ ಮತ್ತು ವೈಜ್ಞಾನಿಕ ಕೃಷಿ ಕ್ರಮಗಳನ್ನು ರೈತರಿಗೆ ಪರಿಚಯಿಸುವ ಉದ್ದೇಶವನ್ನು ಹೊಂದಿತ್ತು.
“ಕಾಳು ಮೆಣಸುನ ತಳಿಗಳು, ನರ್ಸರಿ ನಿರ್ವಹಣೆ ಮತ್ತು ಸಮತೋಲಿತ ಪೋಷಕಾಂಶ ನಿರ್ವಹಣೆ” ಎಂಬ ವಿಷಯದ ಬಗ್ಗೆ ತಾಂತ್ರಿಕ ಅಧಿವೇಶನವನ್ನು ಡಾ. ರಾಜಣ್ಣ ಜಿ.ಎ, ಡಾ. ಎಂ.ಎಸ್ ಶಿವಕುಮಾರ್ ಮತ್ತು ಡಾ. ಗಾಯತ್ರಿ ಜಿ.ಎನ್ ಅವರುಗಳು ನಡೆಸಿದರು. ವಿಜ್ಞಾನಿಗಳು ಜೈವಿಕ ಗೊಬ್ಬರಗಳು ಮತ್ತು ಜೀವಾಮೃತದ ಪಾತ್ರವನ್ನು ವಿವರಿಸಿ, ಅವುಗಳು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುವುದು ಹಾಗೂ ಮಣ್ಣಿನಲ್ಲಿರುವ ಸೂಕ್ಷö್ಮ ಜೀವಾಣುಗಳ ಚಟುವಟಿಕೆ ಯನ್ನು ಸುಧಾರಿಸುವ ಬಗ್ಗೆ ಮಾಹಿತಿ ನೀಡಿದರು. ಸೂಕ್ಷö್ಮ ಪೋಷಕಾಂಶಗಳು, ಸಸ್ಯಗಳ ಬೆಳವಣಿಗೆ, ಉತ್ಪಾದನೆ ಮತ್ತು ಒತ್ತಡ ತಾಳುವ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಾಯಕವೆಂದು ತಿಳಿಸಿದರು. ಕಾಳು ಮೆಣಸಿನ ನರ್ಸರಿ ತಂತ್ರಜ್ಞಾನಗಳು ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಉತ್ತಮ ಉತ್ಪಾದನೆಯನ್ನು ಗಳಿಸಲು ಜೈವಿಕ ಗೊಬ್ಬರಗಳು, ಬಯೋಕ್ಯಾಪ್ಸೂö್ಯಲ್‌ಗಳು ಮತ್ತು ಸೂಕ್ಷö್ಮ ಪೋಷಕಾಂಶಗಳ ಸಮಗ್ರ ಬಳಕೆಯ ಮಹತ್ವವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದ ಭಾಗವಾಗಿ, ಸಮತೋಲನ ಪೋಷಕಾಂಶ ಬಳಕೆಯನ್ನು ಉತ್ತೇಜಿಸಲು ಕಾಳುಮೆಣಸು ಲಘು ಪೋಷಕಾಂಶ ಮಿಶ್ರಣವನ್ನು ರೈತರಿಗೆ ವಿತರಿಸಲಾಯಿತು. ಸುಮಾರು ೭೮ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಕ್ರಿಯವಾಗಿ ಚರ್ಚೆಗಳಲ್ಲಿ ತೊಡಗಿಕೊಂಡ