ಸುಳ್ಯ, ಮೇ.೨೧: ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜಿನಲ್ಲಿ ಗ್ರಾಜ್ಯುವೇಶನ್ ಡೇ ೨೦೨೬” ಅಮರಶ್ರೀ ಭಾಗ್‌ನ ಶ್ರೀ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.

ಗ್ರಾಜ್ಯುವೇಶನ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಎಸ್. ಮೂಡಿತ್ತಾಯ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣವು ಅತ್ಯಂತ ಶಕ್ತಿಯುತವಾದ ಸಾಧನವಾಗಿದೆ ಎಂದರು. ಭಾರತೀಯರ ಪ್ರತಿಭೆ ಮತ್ತು ಸಾಮರ್ಥ್ಯದ ಕುರಿತು ಮಾತನಾಡಿದ ಅವರು, ಭಾರತೀಯರು ಶಿಕ್ಷಣ ಹಾಗೂ ಕೌಶಲ್ಯದಲ್ಲಿ ವಿಶ್ವದಾದ್ಯಂತ ಮೆರೆದಿದ್ದಾರೆ ಎಂದರು. ವಿಫಲತೆಯನ್ನು ಎಂದಿಗೂ ಭಯಪಡಬೇಡಿ. ಪ್ರತಿಯೊಂದು ಯಶಸ್ಸಿನ ಹಿಂದೆ ಅನೇಕ ವಿಫಲತೆಗಳ ಸರಮಾಲೆ ಇರುತ್ತವೆ. ಸಣ್ಣಮಟ್ಟದಲ್ಲಿ ಆರಂಭವಾದ ಪ್ರಯತ್ನವೇ ಒಂದು ದಿನ ದೊಡ್ಡ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಮುಖ್ಯ ಅತಿಥಿಗಳನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳು ೨೦೨೫ರಲ್ಲಿ ವಿ.ಟಿ.ಯು. ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕೆ.ವಿ.ಜಿ. ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ನೀಡಿ ಮತ್ತು ಗ್ರಾಜ್ಯುಯೇಶನ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ವಿತರಿಸಿದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್. ಕುರುಂಜಿ ಕಾಲೇಜು ಮ್ಯಾಗಸೀನ್ ‘ಶಿಲ್ಪಿ ೨೦೨೬’ ಅನ್ನು ಬಿಡುಗಡೆ ಮಾಡಿ, ಪದವಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ತಾಳ್ಮೆ, ಶಿಸ್ತು ಮತ್ತು ನಿರಂತರ ತಯಾರಿಯ ಮಹತ್ವವನ್ನು ತಿಳಿಸಿ ಸಣ್ಣ ಸ್ಥಿರ ಪ್ರಯತ್ನಗಳು ಕಾಲಾನಂತರದಲ್ಲಿ ಉತ್ತಮ ಯಶಸ್ಸಿಗೆ ಕಾರಣವಾಗಬಹುದು ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ಅವರು ಗ್ರಾಜ್ಯುಯೇಶನ್ ಪಡೆದ ವಿದ್ಯಾರ್ಥಿಗಳಿಗೆ ಭವಿಷ್ಯದ ಬದುಕಿನಲ್ಲಿ ಸಾಧನೆ ಮಾಡುವಂತೆ ಪ್ರೇರಣಾದಾಯಕ ಸಂದೇಶ ನೀಡಿದರು.

ವೇದಿಕೆಯ ಮೇಲೆ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರುಗಳಾದ ನಿತ್ಯಾನಂದ ಮುಂಡೋಡಿ, ಸಂತೋಷ್ ಜಾಕೆ ಮತ್ತು ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು ಉಪಸ್ಥಿತರಿದ್ದರು.

ಗ್ರಾಜ್ಯುಯೇಶನ್ ಡೇ ಸಂಚಾಲಕರು, ಉಪಪ್ರಾಂಶುಪಾಲ ಹಾಗೂ ಗಣಿತಶಾಸ್ತç ವಿಭಾಗದ ಮುಖ್ಯಸ್ಥರು ಡಾ. ಶ್ರೀಧರ್ ಕೆ. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಡೀನ್ ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆರ್. ವಂದಿಸಿದರು.