ಮಡಿಕೇರಿ, ಮೇ ೨೧ : ಕೊಡಗು ಜಿಲ್ಲೆಯ ವಿವಿಧ ವಯೋಮಾನದ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರರಿಗೆ ತಾ. ೨೫ ರಂದು ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಅಯ್ಕೆ ಪ್ರಕ್ರಿಯೆ ನಡೆಯಲಿದೆ. ಮಂಗಳೂರಿನ ಯೆನಪೋಯ ವಿಶ್ವವಿದ್ಯಾನಿಲಯದ ಹಿರಿಯ ಕೋಚ್ ಬಿಬಿ ಥೋಮಸ್ ನೇತೃತ್ವದ ಪರಿಣಿತರ ತಂಡ ಆಟಗಾರರನ್ನು ಆಯ್ಕೆ ಮಾಡುತ್ತಿದ್ದು, ಆಯ್ಕೆಯಾದವರಿಗೆ ಶಿಷ್ಯವೇತನ ಜೊತೆ ಯೆನಪೋಯ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣವನ್ನೂ ನೀಡಲಾಗುತ್ತದೆ. ೧೪, ೧೬, ೧೮ ಮತ್ತು ೨೪ ವರ್ಷದೊಳಗಿನ ಹಿರಿಯರ ತಂಡಕ್ಕೂ ಆಯ್ಕೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ತಾ. ೨೫ ರಂದು ತಮ್ಮ ಪಾಸ್‌ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್ ಜೊತೆ ಕಡ್ಡಾಯವಾಗಿ ಬೆಳಿಗ್ಗೆ ೮ ಗಂಟೆಗೆ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಆಟಗಾರರು ಶಾರ್ಟ್ಸ್, ಜೆರ್ಸಿ, ಸ್ಟಡ್ಸ್, ಸ್ಟಾಕಿನ್ಸ್, ಶಿನ್ ಗಾರ್ಡ್ ಕಡ್ಡಾಯವಾಗಿ ತರಬೇಕು. ಯೆನಪೋಯ ಕ್ರೀಡಾ ಅಕಾಡೆಮಿಗೆ ಆಯ್ಕೆಯಾಗುವ ಆಟಗಾರರು ರಾಷ್ಟçಮಟ್ಟದ ವಿವಿಧ ಟೂರ್ನಮೆಂಟ್‌ಗಳಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚನ ಮಾಹಿತಿಗೆ ೮೧೯೭೭೫೧೮೧೨ ಅಥವಾ ೮೩೧೦೪೬೯೭೦೮ ನಂಬರ್ ಅನ್ನು ಸಂಪರ್ಕಿಸುವAತೆ ಕೋರಲಾಗಿದೆ.