ಶನಿವಾರಸಂತೆ, ಮೇ ೨೧ : ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯರಸ್ತೆಯಿಂದ ಎಪಿಸಿಎಂಎಸ್ ಕಟ್ಟಡದವರೆಗೆ ಕಾಂಕ್ರೀಟ್ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ, ಪರಿಶಿಷ್ಟ ಜನಾಂಗದವರ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಉದ್ದೇಶದಿಂದ ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ರಸ್ತೆ ನಿರ್ಮಾಣ, ಚಿಕ್ಕಕೊಳತ್ತೂರು ಗ್ರಾಮದ ರಸ್ತೆ ಡಾಂಬರೀಕರಣ, ಕಾನ್ವೆಂಟ್ ರಸ್ತೆ ಡಾಂಬರೀಕರಣ, ಕೂಜಗೇರಿ ಗ್ರಾಮದ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.

ಮುಖ್ಯಮಂತ್ರಿಗಳ ಅನುದಾನ ರೂ. ೧೦ ಲಕ್ಷದಲ್ಲಿ ಎಪಿಸಿಎಂಎಸ್ ಕಟ್ಟಡಕ್ಕೆ ಬೈಪಾಸ್ ರಸ್ತೆಯಿಂದ ೮೦ ಮೀಟರ್ ಕಾಂಕ್ರೀಟ್ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ, ರೂ. ೧ ಕೋಟಿ ವೆಚ್ಚದಲ್ಲಿ ಹೆಮ್ಮನೆ ಗ್ರಾಮಕ್ಕೆ ೪೦೦ ಮೀಟರ್ ಕಾಂಕ್ರೀಟ್ ರಸ್ತೆ, ರೂ. ೫ ಲಕ್ಷ ಚಿಕ್ಕಕೊಳತ್ತೂರು ಗ್ರಾಮದ ರಸ್ತೆ ಡಾಂಬರೀಕರಣ, ರೂ. ೨೦ ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿಗಳ ಕಾನ್ವೆಂಟ್ ರಸ್ತೆಗೆ ಡಾಂಬರೀಕರಣ, ರೂ. ೫ ಲಕ್ಷ ವೆಚ್ಚದಲ್ಲಿ ಕೂಜಗೇರಿ ಗ್ರಾಮ ರಸ್ತೆಗೆ ಡಾಂಬರೀಕರಣ ಮಾಡಲಾಗುವುದು. ಎಲ್ಲೆಡೆ ಭೂಮಿಪೂಜೆ ನೆರವೇರಿಸಿದ ಶಾಸಕರು ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಒದಗಿಸುತ್ತಿದೆ. ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆ ತಡವಾಗಿಯಾದರೂ ಹಂತಹAತವಾಗಿ ನೆರವೇರಿಸಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಲು ಗ್ರಾಮಸ್ಥರು ಜವಾಬ್ದಾರಿ ತೆಗೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ರಸ್ತೆಗಳ ನಿರ್ಮಾಣದಿಂದ ಸಂಚಾರ ವ್ಯವಸ್ಥೆ ಸುಗಮವಾಗಲಿದೆ.

ಶನಿವಾರಸಂತೆ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸಾರ್ವಜನಿಕ ಸೇವೆಗೆ ಸಹಕಾರ ಅಗತ್ಯ. ಕಾಂಗ್ರೆಸ್ ಪಕ್ಷ ಬೆಳೆಯಬೇಕು ಎಂದು ಹೇಳಿದರು. ಎಪಿಸಿಎಂಎಸ್ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಹಾಗೂ ಮುಖಂಡ ಬಿ.ಬಿ. ನಾಗರಾಜ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಕಾರ್ಯದರ್ಶಿ ಎಸ್.ಸಿ. ಶರತ್ ಶೇಖರ್, ಗ್ಯಾರಂಟಿ ಯೋಜನಾ ತಾಲೂಕು ಅಧ್ಯಕ್ಷ ಜಿ.ಎಂ. ಕಾಂತರಾಜ್, ಅಕ್ರಮ-ಸಕ್ರಮ ಸಮಿತಿ ಸದಸ್ಯ ಜನಾರ್ಧನ್, ಕಾಂಗ್ರೆಸ್ ಮುಖಂಡರಾದ ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ನಿಡ್ತ ಅಶೋಕ್, ಭವಾನಿಗುರು, ಎಸ್.ಎಸ್. ಮಹೇಶ್, ಅಶೋಕ್, ಸರ್ದಾರ್, ಬಿ.ಎಸ್. ಮಂಜುನಾಥ್, ದೇವಾಂಬಿಕ, ಗುತ್ತಿಗೆದಾರ ಅರ್ಜುನ್, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.