ಪೊನ್ನಂಪೇಟೆ, ಮೇ ೨೧ : ಗೋಣಿಕೊಪ್ಪಲು ಸೆಂಟ್ ಥಾಮಸ್ ಶಾಲೆಯಲ್ಲಿ ೧೯೭೩ ರಿಂದ ೧೯೮೦ ರವರೆಗೆ ೧ ನೇ ತರಗತಿಯಿಂದ ೭ ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಾಕ್ರಮವನ್ನು ಕಿರುಗೂರು ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಆಯೋಜಿಸಲಾಗಿತ್ತು. ೪೫ ವರ್ಷಗಳ ಬಳಿಕ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ಮೂಲಕ ಸ್ನೇಹಿತರು ಪರಸ್ಪರ ಸಂತೋಷ ಹಂಚಿಕೊAಡರು.

ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಟಿ. ಜಿ. ಸುರೇಶ್ ಮಾತನಾಡಿ ೪೫ ವರ್ಷಗಳ ನಂತರ ಸಹಪಾಠಿಗಳ ಜೊತೆ ಸೇರಿದ್ದು, ಖುಷಿ ತಂದಿದೆ. ಸಹಪಾಠಿಗಳಾದ ಎಸ್. ಎಸ್. ಮಾದಯ್ಯ, ಎಸ್. ಎಸ್, ತಿಮ್ಮಯ್ಯ ಹಾಗೂ ಪ್ರಣೀತ್ ಅವರು ಸ್ನೇಹಿತರನ್ನು ಒಂದೆಡೆ ಸೇರಿಸುವ ಕಾರ್ಯಕ್ಕೆ ಕೈಜೋಡಿಸಿದ್ದು, ಪ್ರತಿ ವರ್ಷ ಈ ರೀತಿಯ ಸಂತೋಷ ಕೂಟ ಆಯೋಜಿಸುವ ಮೂಲಕ ವರ್ಷಕ್ಕೊಮ್ಮೆ ಪರಸ್ಪರ ಭೇಟಿಯಾಗುವ ಪ್ರಯತ್ನ ಮಾಡಲಾಗುವುದು ಎಂದರು. ಈ ಸಂದರ್ಭ ಪಿ. ಎಸ್.ಮಿಲನ್ ಗಣಪತಿ, ಮಚ್ಚಮಾಡ ಲೋಕೇಶ್, ಪಿ. ಎ. ಕಂಠೇಶ್, ಎಸ್. ಟಿ. ಕಿಶೋರ್, ಪ್ರಸನ್ನ, ಜೀತ್, ಯಶೋಧ, ಕವಿತ, ಲತಾ, ನಳಿನಿ, ಅನಿತಾ, ರಮಾ ಹಾಗೂ ಜ್ಯೋತಿ ಇದ್ದರು.