ಮಡಿಕೇರಿ, ಮೇ ೨೨: ತಾ. ೨೪ ರಂದು ನವದೆಹಲಿಯಲ್ಲಿ ನಡೆಯಲಿರುವ ಅಖಿಲ ಭಾರತ ಬುಡಕಟ್ಟು ಜನಾಂಗದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಕೊಡಗಿನಿಂದ ತೆರಳುತ್ತಿರುವ ೧೧೦ ಗಿರಿಜನ ಪ್ರತಿನಿಧಿಗಳ ಸಭೆ ಗೊಣಿಕೊಪ್ಪದ ದುರ್ಗಾಬೋಜಿ ಸಭಾಂಗಣದಲ್ಲಿ ನಡೆಯಿತು.
ಗಿರಿಜನ ಸುರಕ್ಷಾ ವೇದಿಕೆ ಕೊಡಗು ಜಿಲ್ಲಾ ಘಟಕದ ಸಂಚಾಲಕಿ ಪಣಿಯರವರ ಭಾಗ್ಯ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾನ್ ಜನನಾಯಕ ಬಿರ್ಸಾಮುಂಡಾ ಅವರ ೧೫೦ನೇ ಜಯಂತಿಯ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಲಾಗುತ್ತಿರುವ ಈ ಮಹಾಸಂಗಮದಲ್ಲಿ ದೇಶದ ೫೦೦ಕ್ಕೂ ಹೆಚ್ಚು ಗಿರಿಜನ ಸಮುದಾಯಗಳಿಂದ ಮೂರು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೊಡಗು ಜಿಲ್ಲೆಯ ಆರು ಗಿರಿಜನ ಜಾತಿಗಳ ೧೧೦ ಪ್ರತಿನಿಧಿಗಳು ಸೇರಿದಂತೆ ರಾಜ್ಯದ ಒಟ್ಟು ೧೨೫೦ ಪ್ರತಿನಿಧಿಗಳು ವಿಶೇಷ ರೈಲಿನ ಮೂಲಕ ದೆಹಲಿಗೆ ತೆರಳಲಿದ್ದಾರೆ. ಗಿರಿಜನ ಸಮುದಾಯಗಳ ಸಾಂಸ್ಕೃತಿಕ ಅಸ್ತಿತ್ವ, ಧಾರ್ಮಿಕ ಪರಂಪರೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ರಾಷ್ಟಿçÃಯ ವೇದಿಕೆಯಲ್ಲಿ ಪರಿಚಯಿಸುವ ಅಪರೂಪದ ಅವಕಾಶ ಇದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ದೆಹಲಿಯ ಐದು ವಿಭಿನ್ನ ಪ್ರದೇಶಗಳಿಂದ ಭವ್ಯ ಸಾಂಸ್ಕೃತಿಕ ಶೋಭಾಯಾತ್ರೆ ನಡೆಯಲಿದ್ದು, ಗಿರಿಜನ ಬುಡಕಟ್ಟು ಸಮುದಾಯಗಳ ವೈವಿಧ್ಯಮಯ ವೇಷಭೂಷಣ, ಕಲಾ ಪರಂಪರೆ, ಜನಪದ ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನು ದೇಶದ ಮುಂದೆ ಅನಾವರಣಗೊಳಿಸಲಾಗುತ್ತದೆ. ಬಳಿಕ ಶೋಭಾಯಾತ್ರೆ ಕೆಂಪುಕೋಟೆ ಮೈದಾನದಲ್ಲಿ ಒಂದಾಗಲಿದ್ದು, ನಂತರ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಗಿರಿಜನ ಮುಖಂಡ ಸಿದ್ದಪ್ಪ ಮಾತನಾಡಿ, ಸ್ವಾತಂತ್ರö್ಯ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಗಿರಿಜನ ಪ್ರತಿನಿಧಿಗಳು ಒಂದೆಡೆ ಸಮಾಗಮವಾಗುತ್ತಿರುವುದು ವಿಶೇಷವಾಗಿದೆ. ದೇಶದಲ್ಲಿ ಸುಮಾರು ೭೦೦ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿದ್ದು, ಹಲವರು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ಹಕ್ಕುಗಳ ರಕ್ಷಣೆಗಾಗಿ ಸಂಘಟಿತ ಸಮಾವೇಶದ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.
ಪ್ರಾಂತ ವನವಾಸಿ ಕಲ್ಯಾಣ ಅಧ್ಯಕ್ಷ ಚೆಕ್ಕೇರ ಮನು ಕಾವೇರಪ್ಪ ಮಾತನಾಡಿದರು. ಪ್ರಮುಖರುಗಳಾದ ಆರ್. ಕೆ ಚಂದ್ರ, ದೇವರಕಾಡು ನಿತ್ಯ, ಸೋಲಿಗರ ಉಮೇಶ್, ಅಂಚೆತಿಟ್ಟು ಸಂಜೀವ, ಪರಮೇಶ್ವರ್, ಮುತ್ತುರಾಜ್, ಅಮ್ಮುಣಿ, ಚೋಮು, ಶಶಿಕಲಾ, ಜಯಲಕ್ಷಿö್ಮ, ಭೋಜ, ರಿಧೀಶ್ ಮುಂತಾದವರು ಹಾಜರಿದ್ದರು.