ಐಗೂರು, ಮೇ ೨೨: ಕೇಂದ್ರ ಬುಡಕಟ್ಟು ಸಚಿವಾಲಯ ಮತ್ತು ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ-ಬೆಂಗಳೂರು ಹಾಗೂ ಸೋಮವಾರಪೇಟೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಹಾಡಿಯಲ್ಲಿ ಪ್ರಧಾನ ಮಂತ್ರಿ ಪಿ.ಎಂ ಜನ್‌ಮನ್ ಕಾರ್ಯಕ್ರಮ ನಡೆಯಿತು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಪಂಗಡದವರಿಗೆ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ತಿಳಿಸಿ ಅದನ್ನು ಪಡೆದುಕೊಳ್ಳುವಂತೆ ಗಿರಿಜನರಿಗೆ ಸಭೆಯಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ರಜನಿಕಾಂತ್, ಪಿಡಿಓ ಪೂರ್ಣ ಕುಮಾರ್, ರವಿ, ಶಿವಣ್ಣ, ಇಂದ್ರೇಶ್, ಸೌಮ್ಯ, ಕೃಷಿ ಇಲಾಖೆಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಹಾಡಿ ನಿವಾಸಿಗಳು ಭಾಗವಹಿಸಿದ್ದರು