ವೀರಾಜಪೇಟೆ, ಮೇ ೨೨: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣಕ್ಕೆ ದೂರುಗಳು ಬಂದ ಹಿನ್ನೆಲೆ ಕರವೇ ಕಾರ್ಯಕರ್ತರು ವೀರಾಜಪೇಟೆಯ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಮತ್ತು ಸ್ವಚ್ಛತೆ ಪಾಲಿಸದಿರುವುದನ್ನು ನೋಡಿ ಅಲ್ಲಿನ ಮುಖ್ಯಸ್ಥರನ್ನು ಕರೆಸಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆ ಅಧಿಕಾರಿಗಳು ಕ್ಯಾಂಟಿನ್ಗೆ ಬೀಗ ಜಡಿದಿದ್ದರು.
ಅಧಿಕಾರಿಗಳು ಕೇವಲ ಒಂದು ದಿನ ಮಾತ್ರ ಮುಚ್ಚುವುದು, ಇಂದಿನಿAದ ಕ್ಯಾಂಟೀನ್ ಲಭ್ಯವಿರುವುದಾಗಿ ತಿಳಿಸಿದ್ದರು. ಆದರೆ ಕ್ಯಾಂಟೀನ್ ಮತ್ತೆ ಬಾಗಿಲಿಗೆ ಬೀಗ ಹಾಕಿಕೊಂಡಿತ್ತು.
ಈ ಕುರಿತು ಮಾಹಿತಿ ನೀಡಿದ ಪುರಸಭೆ ಮುಖ್ಯ ಅಧಿಕಾರಿಗಳಾದ ಪಿ.ಕೆ ನಾಚಪ್ಪ ಅವರು, ಶುಚಿತ್ವವನ್ನು ಕಾಪಾಡಿಕೊಂಡು ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ಗುಣಮಟ್ಟವಾದ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಪೌರ ಕಾರ್ಮಿಕರನ್ನು ಬಳಸಿಕೊಂಡು ಕ್ಯಾಂಟೀನ್ ಆವರಣ ಸ್ಚಚ್ಚಗೊಳಿಸಿದ ಬಳಿಕ ಸಾರ್ವಜನಿಕ ಬಳಕೆಗೆ ಇಂದಿರಾ ಕ್ಯಾಂಟೀನ್ ಲಭ್ಯವಾಗುತ್ತದೆ ಎಂದರು.
ಇAದಿರಾ ಕ್ಯಾಂಟೀನ್ ಉಸ್ತುವಾರಿ ವಹಿಸಿರುವ ಸತೀಶ್ ಕುಮಾರ್ ಮಾಹಿತಿ ನೀಡಿ, ಕ್ಯಾಂಟೀನ್ನಲ್ಲಿ ಕೆಲಸ ನಿರ್ವಹಿಸುತ್ತಿರುವವರು ಕಾರಣಾಂತರಗಳಿAದ ಕೆಲಸ ಬಿಟ್ಟು ಹೋಗಿದ್ದಾರೆ. ಕಳೆದ ಎರಡು ದಿನಗಳಿಂದ ಅಲ್ಲಿ ಒಬ್ಬರೇ ವ್ಯಕ್ತಿ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದುದುರಿಂದ ಸ್ಡಲ್ಪ ಅಶುಚಿತ್ವ ಕಂಡುಬAದಿದೆ. ಶುಚಿತ್ವ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ.
ಪ್ರತಿಯೊಬ್ಬರಿಗೂ ಆರೋಗ್ಯಕರ ಆಹಾರ ನೀಡುವುದರೊಂದಿಗೆ ಶುಚಿತ್ವವನ್ನು ಕಾಪಾಡಿಕೊಂಡು ಬರುವುದು ನಮ್ಮ ಕರ್ತವ್ಯ. ಬಹಳ ಅಚ್ಚುಕಟ್ಟಾಗಿ ತಿಂಡಿ, ಊಟ ಒದಗಿಸಲಾಗುತ್ತಿತ್ತು. ಕಾರಣಾಂತರಗಳಿAದ ಸಮಸ್ಯೆ ಉಂಟಾದ್ದರಿAದ ಅಶುಚಿತ್ವ ಕಂಡುಬAದಿದೆ. ಹಾಗಾಗಿ ಕ್ಯಾಂಟೀನ್ ಮುಚ್ಚಿದ್ದೇವೆ. ಇನ್ನೆರಡು ದಿನದಲ್ಲಿ ಸಂಪೂರ್ಣವಾಗಿ ಕ್ಯಾಂಟೀನನ್ನು ಸ್ವಚ್ಛಗೊಳಿಸಿದ ಬಳಿಕ ತೆರೆಯಲಾಗುತ್ತದೆ.
ಇದು ಬಡವರಿಗೆ, ಪಾಪದವರಿಗೆ ಇರುವ ಕ್ಯಾಂಟೀನ್ ಆಗಿದ್ದು, ಅವರ ಸೇವೆ ಮಾಡುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಸೋಮವಾರದಿಂದ ಇಂದಿರಾ ಕ್ಯಾಂಟೀನ್ ಸಾರ್ವಜನಿಕರಿಗೆ ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದರು.