ನಾಪೋಕ್ಲು, ಮೇ ೨೨: ಪ್ರಕೃತಿ ರಮಣೀಯ ಕ್ಷೇತ್ರದಲ್ಲಿ ನೆಲೆನಿಂತಿರುವ ಶ್ರೀ ಈಶ್ವರ ಇಗ್ಗುತ್ತಪ್ಪ ದೇವರ ಮಹಿಮೆ ನಿಜಕ್ಕೂ ಅದ್ಬುತ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಹೇಳಿದರು.

ಅವರು ಶ್ರೀ ಕ್ಷೇತ್ರಕ್ಕೆ ಕುಟುಂಬ ಸಹಿತ ಭೇಟಿ ನೀಡಿದರು. ನೆಲಜಿಯ ಇಗ್ಗುತ್ತಪ್ಪ ದೇವಸ್ಥಾನವು ಸುಂದರವಾಗಿದ್ದು ದಿವ್ಯ ಶಕ್ತಿಯನ್ನು ಹೊಂದಿದೆ. ಕೇವಲ ಗ್ರಾಮದ ಜನರು ಮತ್ತು ಭಕ್ತಾದಿಗಳ ಆರ್ಥಿಕ ನೆರವಿನಿಂದ ನಡೆಸಿದ ಅಭಿವೃದ್ಧಿ ಕಾರ್ಯಗಳು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿವೃದ್ಧಿ ಕಾರ್ಯಗಳಿಗೆ ತಾವೂ ಕೂಡ ಕೈಜೋಡಿಸಿ ದೇವರ ಸೇವೆಗೆ ಸದಾ ಸಿದ್ಧ ಎಂದು ತಿಳಿಸಿ ರೂಪಾಯಿ ೧೦ ಲಕ್ಷದ ಚೆಕ್ ಅನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಕ್ಕಮುಖ್ಯಸ್ಥರಿಗೆ ಹಸ್ತಾಂತರಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ, ತಕ್ಕಮುಖ್ಯಸ್ಥರಾದ ಬದ್ದಂಜೆಟ್ಟಿರ ಬಿ. ನಾಣಯ್ಯ, ನಾಪನೆರವಂಡ ಪೊನ್ನಪ್ಪ, ಕಯಂದಿರ ಉತ್ತಯ್ಯ, ಭಕ್ತ ಜನ ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್, ಪ್ರಮುಖರುಗಳಾದ ಮಣವಟ್ಟಿರ ಚಂಗಪ್ಪ, ಚೀಯಕಪೂವಂಡ ಅಪ್ಪಚ್ಚು, ಅಪ್ಪುಮಣಿಯಂಡ ಸೋಮಣ್ಣ, ಬದಂಜೆಟ್ಟಿರ ದೇವಯ್ಯ, ಅಪ್ಪುಮಣಿಯಂಡ ಉತ್ತಯ್ಯ, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ದಾನಿಗಳಾದ ಮಂಡಿರ ಜಯ ದೇವಯ್ಯ, ದಾನಿಗಳಾದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಕ್ಕಾಟಿರ ಜಯ ಉಪಸ್ಥಿತರಿದ್ದರು.