ಮಡಿಕೇರಿ, ಮೇ ೨೪: ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ೭೭ ವಾರ್ಷಿಕೋತ್ಸವ ತಾ. ೨೫ ಹಾಗೂ ೨೬ ರಂದು ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಪ್ರೊ. ಮೇ. ಬಿ. ರಾಘವ ಅವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೫ ರಂದು ಬೆಳಿಗ್ಗೆ ೧೦.೧೫ಕ್ಕೆ ಕ್ರೀಡೆ ಮತ್ತು ಪ್ರತಿಭೋತ್ಸವ ನಡೆಯಲಿದ್ದು, ಭಾರತೀಯ ಮಹಿಳಾ ಹಾಕಿ ತಂಡದ ತರಬೇತುಗಾರ್ತಿ ಬಿ.ಎಸ್. ಅಂಕಿತಾ ಉದ್ಘಾಟಿಸಲಿದ್ದು, ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ತಾ. ೨೬ ರಂದು ನಡೆಯಲಿರುವ ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೊಡಗು ವಿವಿಯ ಘಟಕ ಕಾಲೇಜಾಗಿರುವ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಕಳೆದ ೭ ದಶಕಗಳಿಂದ ಶೈಕ್ಷಣಿಕ ಸೇವೆ ನೀಡುತ್ತಿದೆ. ನ್ಯಾಕ್ ಸಂಸ್ಥೆಯಿAದ ಬಿ++ ಶ್ರೇಣಿಯನ್ನು ಪಡೆದಿದ್ದು, ಸುಸಜ್ಜಿತ ವ್ಯವಸ್ಥೆಗಳಿವೆ. ಪ್ರಸಕ್ತ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಪ್ರವೇಶಾತಿ ಆರಂಭಗೊAಡಿದ್ದು, ಬಿ.ಎ., ಬಿ.ಕಾಂ, ಬಿ.ಸಿ.ಎ., ಬಿಬಿಎ, ಬಿಎಸ್‌ಡಬ್ಲೂö್ಯ, ಬಿ.ಎಸ್ಸಿ, ಎಂ.ಕಾA, ಎಂಬಿಎ, ಎಂಎಸ್ಸಿ, ಎಂ.ಎ., ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್ಗಳು ಲಭ್ಯವಿವೆ ಎಂದು ವಿವರಿಸಿದ ರಾಘವ ಅವರು, ಹೆಚ್ಚಿನ ಮಾಹಿತಿಗೆ ೦೮೨೭೨೨೯೮೨೨೨, ೮೦೮೮೨೭೨೬೮೯ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದ್ದಾರೆ.

ಗೋಷ್ಠಿಯಲ್ಲಿ ಪ್ರಾಧ್ಯಾಪಕ, ಕೊಡಗು ವಿವಿ ವಿಶೇಷ ಕರ್ತವ್ಯಾಧಿಕಾರಿ ಮೇಚಿರ ರವಿಶಂಕರ್, ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥ ಎಂ.ಪಿ. ಕೃಷ್ಣ, ಸ್ನಾತಕೋತ್ತರ ಕಾರ್ಯಕ್ರಮ ಸಂಯೋಜಕ ಡಾ. ತಿಪ್ಪೇಸ್ವಾಮಿ, ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಶೈಲಶ್ರೀ ಹಾಜರಿದ್ದರು.