ಮಡಿಕೇರಿ, ಮೇ ೨೪: ಅಭಿನಯ ನೃತ್ಯ ಕೇಂದ್ರದ ವಿದ್ಯಾರ್ಥಿಗಳ ಗೆಜ್ಜೆ ಪೂಜೆ ಕಾರ್ಯಕ್ರಮ ಐಗೂರು ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ನಟರಾಜನ ಪೂಜೆ ಮಾಡಿದ ನಂತರ ನೃತ್ಯ ಗುರುಗಳಾದ ಭವ್ಯ ಸುಕನ್ ಅವರಿಂದ ವಿದ್ಯಾರ್ಥಿಗಳು ಗೆಜ್ಜೆಯನ್ನು ಪಡೆದು ನೃತ್ಯ ತರಬೇತಿಯನ್ನು ಆರಂಭಿಸಿದರು. ಗೆಜ್ಜೆಪೂಜೆ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನೆರವೇರಿತು.