ಮಡಿಕೇರಿ, ಮೇ ೨೫: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಮರಗೋಡು ಗೌಡ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಅರೆಭಾಷೆ ಗ್ರಾಮೋತ್ಸವ ಕಾರ್ಯಕ್ರಮವು ತಾ. ೨೬ ರಂದು (ಇಂದು) ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಬೆಳಿಗ್ಗೆ ೯.೩೦ ಗಂಟೆಗೆ ಮರಗೋಡು ಗೌಡ ಸಮಾಜದಿಂದ ಮೆರವಣಿಗೆ ನಡೆಯಲಿದೆ. ಮರಗೋಡು ಗೌಡ ಸಮಾಜದ ಅಧ್ಯಕ್ಷÀ ಕಟ್ಟೆಮನೆ ಜನಾರ್ದನ ಅವರು ಚಾಲನೆ ನೀಡಲಿದ್ದಾರೆ. ನಂತರ ಬೆಳಗ್ಗೆ ೧೦.೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಗಣ್ಯರು ಭಾಗವಹಿಸಲಿದ್ದಾರೆ.