ಮುಳ್ಳೂರು, ಮೇ ೨೫: ಸಮೀಪದ ಗೌಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಹೆಗ್ಗುಳ ಗ್ರಾಮದಲ್ಲಿರುವ ಪುರಾಣ ಪ್ರಸಿದ್ದ ಶ್ರೀ ಲಕ್ಷಿö್ಮ ಚನ್ನಿಗರಾಯ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಶ್ರೀ ಜೋಡಿ ಹನುಮಂತ ದೇವರುಗಳ ವಿಶೇಷ ಪೂಜಾ ಮಹೋತ್ಸವ ಸಂಪನ್ನಗೊAಡಿತು.
೨ ದಿನಗಳ ಕಾಲ ನಡೆದ ಪೂಜಾ ಮಹೋತ್ಸವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಗಂಗಾ ಪೂಜೆ, ಹೋಮ ಹವನ ಮುಂತಾದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಶ್ರೀ ಜೋಡಿ ಹನುಮಂತ ದೇವರಿಗೆ ವಿಶೇಷ ಪೂಜೆ ನೆರವೇರಿತು. ಪೂಜಾ ಮಹೋತ್ಸವ ಸಂಪನ್ನಗೊಳ್ಳುತ್ತಿದ್ದAತೆ ಮಳೆ ಬಂದದ್ದು, ವಿಶೇಷವಾಗಿತ್ತು. ಪೂಜಾ ಮಹೋತ್ಸವದ ಅಂಗವಾಗಿ ೨ ದಿನವೂ ದೇವಸ್ಥಾನ ಸೇವಾ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.