ಕೂಡಿಗೆ, ಮೇ ೨೫: ಕೂಡುಮಂಗಳೂರು- ಕೂಡ್ಲೂರು ಅವಳಿ ಗ್ರಾಮಗಳ ದೊಡ್ಡಮ್ಮ ತಾಯಿಯ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಎರಡು ವರ್ಷಕ್ಕೊಮ್ಮೆ ನಡೆಯುವ ರಥೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ವೇದಿಕಬ್ರಹ್ಮ ಸುಬ್ಬರಾಯ ಶಾಸ್ತಿç ನೇತೃತ್ವದಲ್ಲಿ ದೇವರ ಶುದ್ಧಿ, ಅಭಿಷೇಕ, ಹೋಮ ಹವನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ದೇವಾಲಯ ಆವರಣದಲ್ಲಿ ನಡೆದವು.

ದೊಡ್ಡಮ್ಮ ತಾಯಿಯ ಪೂಜೋತ್ಸವ ಅಂಗವಾಗಿ ಕೂಡ್ಲೂರು ಹಾಗೂ ಕೂಡುಮಂಗಳೂರು ಗ್ರಾಮದ ದೇವಾಲಯದಿಂದ ರಾತ್ರಿ ೧೨ ಗಂಟೆಗೆ ರಥೋತ್ಸವವು ಪ್ರತ್ಯೇಕವಾಗಿ ಹೊರಟು ಹಾಸನ ಹೆದ್ದಾರಿಯ ಮುಖ್ಯರಸ್ತೆಯಲ್ಲಿ ಮೆರವಣಿಗೆಯ ಮೂಲಕ ವಾದ್ಯಗೋಷ್ಠಿ, ಸಿಡಿಮದ್ದುಗಳ ಪ್ರದರ್ಶನ ದೊಂದಿಗೆ ಸಾಗಿ ದೊಡ್ಡಮ್ಮ ತಾಯಿಯ ಬನವನ್ನು ಸೇರಿತು. ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿಕೊಂಡ ಪ್ರವೇಶ ಮಾಡಿ ದೇವಿಗೆ ಪೂಜೆ ಮತ್ತು ಮಹಾಮಂಗಳಾರತಿಯೊAದಿಗೆ ಪೂಜಾ ಕಾರ್ಯಕ್ರಮಗಳು ನಡೆದವು. ಮರು ದಿನ ದೇವಾಲಯದ ಆವರಣದಲ್ಲಿ ಸಾರ್ವಜನಿಕರ, ಗ್ರಾಮಸ್ಥರ ಪೂಜೋತ್ಸವ, ಜಾತ್ರೋತ್ಸವ ಕಾರ್ಯಕ್ರಮಗಳು ನಡೆದವು.ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಕೂಡಿಗೆ ಕುಶಾಲನಗರ ಕೂಡ್ಲೂರು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪೂಜೆಯಲ್ಲಿ ಭಾಗಿಯಾದ ಶಾಸಕ ಡಾ. ಮಂತರ್ ಗೌಡ ಅವರು, ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಪವನ್ ಕುಮಾರ್, ಉಪಾಧ್ಯಕ್ಷ ವಿ.ಎಂ. ಮಂಜುನಾಥ್, ಕಾರ್ಯದರ್ಶಿ ಎಂ.ಡಿ. ಹರೀಶ್, ಖಜಾಂಚಿ ಕೆ.ಎಸ್. ಶಿವಣ್ಣ, ಸೇರಿದಂತೆ ಸಮಿತಿ ನಿರ್ದೇಶಕರು ಸೇರಿದಂತೆ ಇನ್ನಿತರರು ಹಾಜರಿದ್ದರು.