ನಾಪೋಕ್ಲು, ಮೇ.೨೫: ಸಮೀಪದ ಪಾಲೂರು ಗ್ರಾಮದ ಗ್ರಾಮದೇವತೆಯಾದ ಶ್ರೀ ಕಾಳಿಕಾಂಬ ಅಮನೂರು ತಾಯಿಯ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ದೇವರ ಜಳಕ ಕೈಗೊಳ್ಳಲಾಯಿತು. ಬಳಿಕ ವಾದ್ಯಮೇಳ ಹಾಗೂ ದೇವರ ಅಲಂಕೃತ ಮೂರ್ತಿಯೊಂದಿಗೆ ತಿರುವಳಕಾರರು, ಭಕ್ತರು ಮೆರವಣಿಗೆ ತೆರಳಿ ದೇವಾಲಯದಲ್ಲಿ ದೇವರಿಗೆ ಮಹಾಪೂಜೆ, ಇನ್ನಿತರ ದೇವರ ಸೇವೆಗಳು ಜರುಗಿ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ, ಕಾಣಿಕೆ ಒಪ್ಪಿಸಿ ಶ್ರದ್ಧಾಭಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.ಉತ್ಸವದಲ್ಲಿ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದೇವಾಲಯದ ಪ್ರಮುಖರಾದ ಎಡಿಕೇರಿ ಪ್ರವೀಣ್, (ಪವಿ) ದೇವರ ಮುಖ್ಯ ಪೂಜಾರಿ ಬೈತಡ್ಕ ಡೆಲ್ವಿ ದೇವಯ್ಯ, ಅಣ್ಣಿ ಗಣಪತಿ, ಸೋನಾಜಿತ್, ಸೂದನ ಮಧು, ಬೈತಡ್ಕ ಜೀವನ್, ಜಿಲ್ಲು, ಹಿರಿಯರಾದ ಬೈತಡ್ಕ ದೇವಯ್ಯ, ಚಿನ್ನಪ್ಪ, ಕುಟ್ಟಪ್ಪ, ಪುದಿಯನೆರವನ ಮೋಹನ್ ಪೊನ್ನಪ್ಪ, ದಿಲೀಪ್, ಅಶೋಕ, ಅಜಿತ್, ದಿನೇಶ್, ಸೂದನ ಮದನ್, ಈರಪ್ಪ, ಅಚ್ಚುಡ ಗಣೇಶ, ಚಿಕ್ಕನ ದಿನೇಶ್ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.