ಮಡಿಕೇರಿ, ಮೇ ೨೫: ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಯೊನೆಕ್ಸ್ ಸನ್ ರೈಸ್ ರಾಜ್ಯಮಟ್ಟದ ೧೫ ಮತ್ತು ೧೭ ವರ್ಷ ದೊಳಗಿನ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೊಡಗಿನ ವಿಶಾಲ್ ಉತ್ತಪ್ಪ ಸಿಂಗಲ್ಸ್ನಲ್ಲಿ ಕಂಚಿನ ಪದಕ ಹಾಗೂ ಮಿಶ್ರ ಡಬಲ್ಸ್ನಲ್ಲಿ ಮೈಸೂರಿನ ಹನ್ಸಿಕ ರಾಕೇಶ್ ಅವರ ಜೊತೆಗೂಡಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಇವರು ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆz À(ಉಡಿಚಿss ಖooಣ ಠಿಡಿogಡಿಚಿm) ಕಾರ್ಯಕ್ರಮದಿಂದ ಆಯ್ಕೆಯಾಗಿ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಹೈದರಾಬಾದಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿಶಾಲ್ ಉತ್ತಪ್ಪ ಮೈಸೂರಿನ ಪ್ರಗತಿ ಎಲೈಟ್ ಪಬ್ಲಿಕ್ ಶಾಲೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಡಿಕೇರಿ ನಿವಾಸಿ ಬೊಪ್ಪಂಡ ಭೀಮಯ್ಯ ಹಾಗೂ ಕುಸುಮ (ತಾಮನೆ: ಕಂಬೀರAಡ) ದಂಪತಿಯ ಪುತ್ರ.