ಪೊನ್ನಂಪೇಟೆ, ಮೇ. ೨೫: ೨೦೨೬-೨೭ನೇ ಸಾಲಿನ ವೀರಾಜಪೇಟೆ ಮದರಸ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವೀರಾಜಪೇಟೆ ನಸ್ರತುಲ್ ಉಲುಮ ಮದ್ರಸ ಸಭಾಂಗಣದಲ್ಲಿ, ಪೆರುಂಬಾಡಿ ಸಂಶುಲ್ ಉಲಮ ಎಜುಕೇಷನ್ ಸೆಂಟರ್‌ನ ಮುಖ್ಯಸ್ಥರಾದ ಇಸ್ಮಾಯಿಲ್ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಮೊಹಿದ್ದಿನ್ ಹಾಜಿ ತಿತಿಮತಿ, ಉಪಾಧ್ಯಕ್ಷರಾಗಿ ಹಂಸ ಕೆ.ಎಸ್ ಬೆಮ್ಮತ್ತಿ, ಬಶೀರ್ ಹಾಜಿ ಕೆ.ಎ ಎಡಪಾಲ, ಕಾರ್ಯದರ್ಶಿಯಾಗಿ ಅಶ್ರಫ್ ಸಿ.ಎಂ ಪೊನ್ನಂಪೇಟೆ, ಜಂಟಿ ಕಾರ್ಯದರ್ಶಿಗಳಾಗಿ ಶರೀಫ್ ವೀರಾಜಪೇಟೆ, ನಾಸೀರ್ ಗೋಣಿಕೊಪ್ಪ, ಖಜಾಂಚಿಯಾಗಿ ಸಿಪಿಎಂ ಬಶೀರ್ ಹಾಜಿ ಪೆರುಂಬಾಡಿ ಆಯ್ಕೆಯಾದರು.

ಸಮಿತಿಯ ಸದಸ್ಯರಾಗಿ ಕೆ.ಹೆಚ್ ಮಹಮದ್ ರಫೀಕ್, ಅಬುಬುಕರ್ ಸಿದ್ದಿಕ್ ಹಾಜಿ, ಆಲಿ ಎಂ.ಬಿ, ರಫೀಕ್ ಧಾರಿಮಿ, ಮೆಹರೂಫ್ ಎನ್.ಎಂ ಅವರನ್ನು ಆಯ್ಕೆ ಮಾಡಲಾಯಿತು.