ವೀರಾಜಪೇಟೆ, ಮೇ.೨೬: ವೀರಾಜಪೇಟೆ ಪುರಸಭಾ ವ್ಯಾಪ್ತಿ ಮತ್ತು ವೀರಾಜಪೇಟೆ ಹಾಗೂ ಅಮ್ಮತ್ತಿ ಹೋಬಳಿಯ ಗ್ರಾಮೀಣ ಪ್ರದೇಶಗಳ ಜಮೀನು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸಂಬAಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಅವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗುತ್ತಿದ್ದು ಮಳೆಗಾಲ ಸಂದರ್ಭದಲ್ಲಿ ಮಣ್ಣು ಜರಿದು ಮನೆ ಹಾನಿ, ಜಾನುವಾರು ಹಾನಿ, ಮಾನವ ಪ್ರಾಣಹಾನಿ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗುವ ಸಂಭವವಿದೆ.

ಆದ್ದರಿAದ ಸಾರ್ವಜನಿಕರು ಯಾವುದೇ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಮಣ್ಣು ತೆಗೆಯಬಾರದು. ಅಗತ್ಯವಾಗಿ ಅನುಮತಿ ಪತ್ರ ಪಡೆದು ಬಳಿಕ ಮಣ್ಣು ತೆಗೆದು ಸಹಕಾರ ನೀಡುವಂತೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.