ಕೂಡಿಗೆ, ಮೇ. ೨೬: ಕುಶಾಲನಗರ ಪುರಸಭೆಯ ಎಲ್ಲಾ ವಾರ್ಡ್ಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ರೂ.೩೦ ಕೋಟಿ ವೆಚ್ಚದ ಅಮೃತ್-೨ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯು ಆರಂಭಗೊAಡು, ಪೈಪ್ಲೈನ್ ಅಳವಡಿಕೆ ಮಾಡುವ ಕಾರ್ಯ ಮತ್ತು ಬೃಹತ್ ಟ್ಯಾಂಕ್ಗಳ ಅಳವಡಿಕೆ ಮಾಡುವ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ಒಂದು ವರ್ಷ ಕಳೆದರೂ ಸಹ ಪೂರ್ಣಗೊಳ್ಳದೆ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರಕ್ಕೆ ಈ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಅತಿ ಮೆಲ್ಲನೆ ಸಾಗುತ್ತಿದೆ.
ಕೂಡಿಗೆಯಲ್ಲಿನ ಕಾವೇರಿ-ಹಾರಂಗಿ ನದಿ ಸಂಗಮವಾಗುವ ಸ್ಥಳದಲ್ಲಿ ಅತ್ಯಾಧುನಿಕ ಯಂತ್ರಗಳ ಮೂಲಕ ನೀರನ್ನು ತೆಗೆದು ಕುಶಾಲನಗರ ಜಲಗಾರದಲ್ಲಿನ ಶುದ್ಧೀಕರಣ ಘಟಕಕ್ಕೆ ನೀರನ್ನು ಸರಬರಾಜು ಮಾಡುವ ಯೋಜನೆ ಇದಾಗಿದೆ. ಈ ಸಂಬAಧ ಸಂಗಮ ವ್ಯಾಪ್ತಿಯಲ್ಲಿ ಮೋಟಾರು ಯಂತ್ರ, ಬೃಹತ್ ಪೈಪ್ಗಳ ಅಳವಡಿಕೆ ಹಾಗೂ ಜಾಕ್ವೆಲ್ಗಳ ಅಳವಡಿಕೆ ಸಂಬAಧಿಸಿದAತೆ ಸಿದ್ಧತೆ ನಿಧಾನಗತಿಯಲ್ಲಿ ನಡೆಯುತ್ತಿದೆ.
ಅಂದಾಜು ರೂ.೩೦.೮೬ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಬAಧಿಸಿದ ಗುತ್ತಿಗೆದಾರರು ಮುಂದಾಗಬೇಕಾಗಿದೆ.
ಕುಶಾಲನಗರದ ಹೃದಯ ಭಾಗದಲ್ಲಿರುವ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬೃಹತ್ ಟ್ಯಾಂಕ್ನ ಕಾಮಗಾರಿಯು ಸಹ ನಿಧಾನಗತಿಯಲ್ಲಿ ಸಾಗುತ್ತಿದೆ.
ಕೂಡಿಗೆ-ಕುಶಾಲನಗರದ ವರೆಗೆ ಪೈಪ್ಲೈನ್ ಅಳವಡಿಕೆಗೆ ತೆಗೆದ ಕಾಲುವೆಗಳನ್ನು ಸಮರ್ಪಕವಾಗಿ ಮುಚ್ಚುವಂತೆ ಗ್ರಾಮಸ್ಥರ ಆಗ್ರಹವಾಗಿದೆ. ಸಂಬAಧಿಸಿದ ಅಧಿಕಾರಿ ವರ್ಗದವರು, ಶಾಸಕರು ಕಾಮಗಾರಿಯನ್ನು ನಿಯಮಾನುಸಾರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ