ಮಡಿಕೇರಿ, ಮೇ.೨೬: ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್-ಮಡಿಕೇರಿ ಸಹಕಾರ ತರಬೇತಿ ಸಂಸ್ಥೆಯು ಜುಲೈ ೧ ರಿಂದ ೬ ತಿಂಗಳ ಅವಧಿಯ ರೆಗ್ಯೂಲರ್ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್ ಸಹಕಾರ ತರಬೇತಿ ಪ್ರಾರಂಭಿಸುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಯ ಪಿರಿಯಪಟ್ಟಣ ತಾಲೂಕು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕುಗಳು ತರಬೇತಿ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ವ್ಯಾಪ್ತಿಯಲ್ಲಿನ ನಿವಾಸಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ರೆಗ್ಯೂಲರ್ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್ ತರಬೇತಿ ಪಡೆಯಲು ಕನಿಷ್ಟ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು; ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ಸಾಮಾನ್ಯ ಅಭ್ಯರ್ಥಿಗಳಿಗೆ ರೂ.೫೦೦ ಶಿಷ್ಯವೇತನ ಮತ್ತು ವಿಶೇಷ ನಿರುದ್ಯೋಗ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.೬೦೦ ಶಿಷ್ಯವೇತನ ನೀಡಲಾಗುವುದು ಹಾಗೂ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಉಚಿತ ವಸತಿ ಗೃಹದ ವ್ಯವಸ್ಥೆ ಇರುತ್ತದೆ.
ದೂರಶಿಕ್ಷಣ: “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್” ಪ್ರವೇಶ ಪ್ರಾರಂಭ ಕೋರ್ಸ್ ಅವಧಿ ೬ ತಿಂಗಳು (ಸಹಕಾರ ಸಂಘ/ಸAಸ್ಥೆ/ಬ್ಯಾAಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ). ಇತ್ತೀಚಿನ ಕಾಯಿದೆ ತಿದ್ದುಪಡಿ ಅನ್ವಯ ಕೆ.ಸಿ.ಎಸ್ ನಿಯಮ ೧೭(ಎ)(ಬಿ) ಪ್ರಕಾರ ಪದೋನ್ನತಿ ಹೊಂದಬೇಕಾದರೆ ಕಡ್ಡಾಯವಾಗಿ ಡಿ.ಸಿ.ಎಂ ಕೋರ್ಸ್ ಪಡೆಯಬೇಕಿದೆ. ಪ್ರತಿ ವರ್ಷ ಜನವರಿ-ಜೂನ್ ಮತ್ತು ಜುಲೈ-ಡಿಸೆಂಬರ್‌ವರೆಗೆ ಎರಡು ಅಧಿವೇಶನಗಳು, ಅಧ್ಯಯನ ಸಾಹಿತ್ಯ ನೀಡಲಾಗುವುದು. ೬ ತಿಂಗಳ ಅವಧಿಯಲ್ಲಿ (೫+೫=೧೦) ೦೨ ದಿನಗಳ ಸಂಪರ್ಕ ತರಗತಿಗಳು, ಹೈಬ್ರಿಡ್ ಮಾದರಿಯಲ್ಲಿ ಆಫ್‌ಲೈನ್ ತರಗತಿಗಳು, ಸಹಕಾರ ವಾರಪತ್ರಿಕೆಯನ್ನು ನೀಡಲಾಗುವುದು. ತರಬೇತಿ ಪೂರ್ಣಗೊಳಿಸಿದವರಿಗೆ ಅಂಕಪಟ್ಟಿ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು. ಆನ್‌ಲೈನ್‌ನಲ್ಲಿ ಪ್ರವೇಶಾತಿ ಲಿಂಕ್: Websiಣe: ತಿತಿತಿ.ಞsಛಿಜಿಜಛಿm.ಛಿo.iಟಿ.
ಅರ್ಜಿ ಫಾರಂ ದೊರೆಯುವ ಸ್ಥಳ: ಪ್ರಾಂಶುಪಾಲರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಮುತ್ತಪ್ಪ ದೇವಸ್ಥಾನದ ಹತ್ತಿರ, ಅಬ್ಬಿಫಾಲ್ಸ್ ರಸ್ತೆ, ಮಡಿಕೇರಿ ೫೭೧೨೦೧, ದೂರವಾಣಿ ಸಂಖ್ಯೆ: ೯೯೦೨೧೮೯೮೭೨, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ನಿ., ಪೆನ್ಷನ್‌ಲೇನ್, ನಗರಸಭೆ ಹಿಂಭಾಗ ರಸ್ತೆ, ಮಡಿಕೇರಿ-೫೭೧೨೦೧, ದೂರವಾಣಿ ಸಂಖ್ಯೆ: ೮೦೭೩೭೯೩೬೬೯, ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಾಸನ ಜಿಲ್ಲಾ ಸಹಕಾರ ಯೂನಿಯನ್, ನಿ., ಹಳೇ ಬಸ್ ನಿಲ್ದಾಣದ ಹತ್ತಿರ, ಹಾಸನ-೫೭೩೨೦೧, ದೂರವಾಣಿ ಸಂಖ್ಯೆ: ೯೮೪೫೨೫೩೬೩೯. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: ೯೬೬೩೧೫೩೯೨೨, ೮೭೬೨೯೨೫೮೬೨, ೮೭೬೨೧೧೦೯೫೨ ನ್ನು ಸಂಪರ್ಕಿಸಬಹುದು ಎಂದು ಕೆಐಸಿಎಂ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ.