*ಗೋಣಿಕೊಪ್ಪ, ಮೇ ೨೭: ದಕ್ಷಿಣ ಕೊಡಗಿನ ಬುಡಕಟ್ಟು ಜನರ ವಿಶಿಷ್ಟ ಬೇಡು ಹಬ್ಬದ ವೇಷಧಾರಿಗಳು ಗೋಣಿಕೊಪ್ಪ, ತಿತಿಮತಿ, ವೀರಾಜಪೇಟೆ ಭಾಗಗಳಲ್ಲಿ ಹರಕೆ ಕಾಣಿಕೆ ಬೇಡುವ ಮೂಲಕ ಕಾಣಿಸಿಕೊಂಡರು. ಅಪಾರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ವೇಷಧಾರಿಗಳು ಮೊದಲ ದಿನದಲ್ಲಿ ಬೆರಳೆಣಿಕೆಯಷ್ಟು ಕಾಣಿಸಿಕೊಂಡರು. ವಿವಿಧ ಪ್ಲಾಸ್ಟಿಕ್ ಪರಿಕರಗಳನ್ನು ಬಳಸಿ ವಾದ್ಯ ಹೊರಡಿಸುವ ಮೂಲಕ ಭಕ್ತರು ಪಟ್ಟಣದ ಮುಖ್ಯಬೀದಿಗಳಲ್ಲಿ ಮಾತ್ರವಲ್ಲದೆ ಮನೆ ಮನೆಗಳಿಗೂ ತೆರಳಿ ಕಾಣಿಕೆಯನ್ನು ಬೇಡುತ್ತಿದ್ದರು. ನಗರದಲ್ಲಿ ಕಾಣಿಸಿಕೊಂಡ ವೇಷಧಾರಿಗಳ ಗುಂಪುಗಳ ನೃತ್ಯದಿಂದಾಗಿ ಪಟ್ಟಣದಲ್ಲಿ ವಾಹನ ಸವಾರರು ಟ್ರಾಫಿಕ್ ಬಿಕ್ಕಟ್ಟು ಎದುರಿಸಬೇಕಾಯಿತು.
ಚೆಯ್ಯಂಡಾಣೆ
ಚೆಯ್ಯAಡಾಣೆ: ಕೊಡಗಿನಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದ ಮಂದಿ ತಮ್ಮ ಜನಾಂಗದ ಸಂಭ್ರಮದ ಹಬ್ಬವಾದ ಬೇಡುಹಬ್ಬದ ಪ್ರಯುಕ್ತ ಚೆಯ್ಯಂಡಾಣೆಯ ಪಟ್ಟಣದ ಬೀದಿಗಳಲ್ಲಿರುವ ಅಂಗಡಿ, ಮಳಿಗೆಗಳಿಗೆ ತೆರಳಿ ಕುಣಿದು ಕುಪ್ಪಳಿಸಿ ಕಾಣಿಕೆ ಸ್ವೀಕರಿಸಿ ತೆರಳಿದರು.