ವೀರಾಜಪೇಟೆ, ಮೇ. ೨೭: ವೀರಾಜಪೇಟೆ ಸಮೀಪದ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರವು ಯಶಸ್ವಿಯಾಗಿ ಜರುಗಿತು.
ಸ್ಲ್ಯಾಶ್ ಅಂಡ್ ಸ್ಪಾರ್ಕ್ ೨೦೨೬ ಎಂಬ ಧ್ಯೇಯದಡಿಯಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು. ನಾಲ್ಕು ವಾರಗಳ ಕಾಲ ಜರುಗಿದ ಈ ಶಿಬಿರಕ್ಕೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ಚಾಲನೆ ನೀಡಿದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸೃಜನಾತ್ಮಕ ಕಲಿಕೆಯ ಜೊತೆಗೆ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ಕಲೆ, ಕ್ರೀಡೆ ಹಾಗೂ ವಿಜ್ಞಾನದ ಕುರಿತಾದ ಚಟುವಟಿಕೆಗಳ ಕುರಿತು ಪರಿಚಯಿಸಲಾಯಿತು. ಮಕ್ಕಳಿಗೆ ಕಾರ್ಡ್ ಬೋರ್ಡ್ ಕ್ರಿಯೇಷನ್, ಡೂಡಲ್ ಆರ್ಟ್, ಸ್ಕಿçಬಲ್ ಆರ್ಟ್, ಬಾಟಲ್ ಪೇಂಟಿAಗ್, ಅಡುಗೆ ತಯಾರಿಸುವ ವಿಧಾನಗಳು, ಪರಿಸರ ವಿಜ್ಞಾನ, ಆಡಿಯೋ ವಿಜುವಲ್ ಕಮ್ಯುನಿಕೇಶನ್, ರೊಬೊಟಿಕ್ಸ್ ಮುಂತಾದ ವಿಷಯದ ಕುರಿತು ತರಬೇತಿ ನೀಡಲಾಯಿತು. ಮಕ್ಕಳು ಕೂಡ ತಮ್ಮ ಕೈ ಚಳಕದಿಂದ ಅನೇಕ ಸುಂದರ ಕಲಾಕೃತಿಗಳನ್ನು ತಯಾರಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿ ಪರಸ್ಪರ ಸ್ನೇಹ, ಸಹಕಾರ ಹಾಗೂ ತಂಡದ ನಾಯಕತ್ವದ ಮನೋಭಾವವನ್ನು ಬೆಳೆಸಿಕೊಂಡರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಪೂಜಾ ಸಜೇಶ್, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಸೃಜನಾತ್ಮಕ ಕಲಿಕೆಗೆ ಇಂತಹ ಶಿಬಿರಗಳು ಉಪಯುಕ್ತವಾಗಿದ್ದು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದಲ್ಲದೆ ಜ್ಞಾನ ಹಾಗೂ ಜೀವನ ಕೌಶಲ್ಯವನ್ನು ಕಲಿಸುತ್ತದೆ. ಪೋಷಕರು ಮಕ್ಕಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಲ್ಲಿ ಅವರ ಕಲಿಕೆಯು ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದರು. ಸ್ಲಾ÷್ಯಶ್ ಅಂಡ್ ಸ್ಪಾರ್ಕ್ ೨೦೨೬ರ ಮಕ್ಕಳ ಬೇಸಿಗೆ ಶಿಬಿರವು ವಿನೂತನ ಕಲಿಕೆಗಳೊಂದಿಗೆ ಯಶಸ್ವಿಯಾಗಿ ಜರುಗಿದೆ ಎಂದರು. ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಪ್ರತಿಮಾ, ಮುಖ್ಯ ಶಿಕ್ಷಕರಾದ ಮೀರಾ ಪೂಣಚ್ಚ, ಕ್ಯಾಂಪಸ್ ನಿರ್ವಹಣೆಗಾರರಾದ ರಿಚರ್ಡ್, ತರಬೇತುದಾರರು ಹಾಗೂ ಅಮ್ಮತ್ತಿಯ ಲೈಟ್ ಜೂಮ್ ಆಡ್ಸ್ನ ಸ್ಥಾಪಕರಾದ ಥೌಸೀಫ್, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಶಿಕ್ಷಕರುಗಳು, ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.