ಮಡಿಕೇರಿ, ಮೇ ೨೭: ಚೆನ್ನೆöÊನ ಮನೋಗಾನಂ ಸಂಗೀತ ವಿದ್ಯಾಸಂಸ್ಥೆ, ಮಡಿಕೇರಿ ಹಾಗೂ ತಲಕಾವೇರಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ತಾ. ೩೦ರಂದು ತಲಕಾವೇರಿಯಲ್ಲಿ ಬೆಳಿಗ್ಗೆ ೮.೩೦ ಕ್ಕೆ ಹಾಗೂ ತಾ. ೩೧ರಂದು ಮಡಿಕೇರಿಯ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಬೆಳಿಗ್ಗೆ ೭ ಗಂಟೆಗೆ ಕಾರ್ಯಕ್ರಮಗಳು ನಡೆಯಲಿವೆ

ಚೆನ್ನೆöÊನ ಈ ಸಂಗೀತ ವಿದ್ಯಾ ಸಂಸ್ಥೆ ಪ್ರತಿ ವರ್ಷ ತನ್ನ ವಿದ್ಯಾರ್ಥಿಗಳನ್ನು ದೇಶದ ವಿವಿಧ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.

ತನ್ನ ಆರು ಮತ್ತು ಏಳನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಕೊಡಗಿನಲ್ಲಿ ಸಂಗೀತ ಸುಧೆ ಹರಿಯ ಬರಲಿದ್ದು ಮಕ್ಕಳ ಸಂಗೀತದೊAದಿಗೆ ಪಿಟೀಲು ವಾದನ ಕೂಡ ಇರಲಿದ್ದು, ಶಕ್ತಿ ಪತ್ರಿಕೆಯ ಸಂಪಾದಕ ಚಿದ್ವಿಲಾಸ್ ಅವರ ಸಹಕಾರದಿಂದ ಈ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಸಂಸ್ಥೆಯ ಪ್ರಾಂಶುಪಾಲ ರಮಶ್ರೀ ತಿಳಿಸಿದ್ದಾರೆ.