ವಿಶ್ಲೇಷಣೆ ಅನಿಲ್ ಎಚ್.ಟಿ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ಮೂರು ವರ್ಷಗಳ ಕಾಲ ಅತ್ಯಂತ ರಹಸ್ಯವಾಗಿದ್ದ ವಿಚಾರವೊಂದು ಬಹಿರಂಗವಾಗುವ ಮೂಲಕ ಕುತೂಹಲಕ್ಕೆ ತೆರೆಬಿದ್ದಿದೆ. ರಹಸ್ಯ ಸ್ಫೋಟವಾಗುವ ಮೂಲಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತನ್ನ ಹುದ್ದೆ ತ್ಯಜಿಸುತ್ತಿದ್ದಾರೆ. ಅರ್ಥಾತ್ ಸಿದ್ದರಾಮಯ್ಯ ಸಿಎಂ ಪದ ತ್ಯಾಗದಿಂದಾಗಿ ರಹಸ್ಯ ಬಹಿರಂಗಗೊAಡಿದೆ!

ರಾಜಕೀಯದಲ್ಲಿ ಯಾವುದೇ ಒಂದು ವಿಚಾರವನ್ನು ಮೂರು ವರ್ಷಗಳಷ್ಟು ಸುದೀರ್ಘ ಅವಧಿಗೆ ರಹಸ್ಯವಾಗಿಟ್ಟುಕೊಳ್ಳುವುದು ಖಂಡಿತಾ ಅಸಾಧ್ಯ. ಮೂರು ವರ್ಷಗಳ ಹಿಂದೆ ಎಐಸಿಸಿಯ ದೆಹಲಿ ಕೇಂದ್ರ ಕಚೇರಿಯಲ್ಲಿ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಸುರ್ಜಿವಾಲಾ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಮಾತುಕತೆಯಲ್ಲಿ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಮತ್ತು ಅನಂತರದ ಎರಡೂವರೆ ವರ್ಷ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವುದು ಎಂಬ ಬಗ್ಗೆ ಮಾತುಕತೆಯಾಗಿತ್ತು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಆಗಿಂದಾಗ್ಗೆ ಕೇಳಿಬರುತ್ತಲೇ ಇತ್ತು.

ಅಲ್ಲಿ ಏನು ಮಾತುಕತೆಯಾಗಿದ್ದು, ಅಧಿಕಾರದ ಹಂಚಿಕೆ ಯಾರಿಗೆ, ಯಾವ ರೀತಿಯಾಗಿತ್ತು ಎಂಬ ಬಗ್ಗೆ ಯಾರೂ ಬಾಯಿ ಬಿಟ್ಟಿರಲಿಲ್ಲ. ಶಿವಕುಮಾರ್ ಕಳೆದೊಂದು ವರ್ಷದಿಂದ ಈ ಬಗ್ಗೆ ಪರೋಕ್ಷವಾಗಿ ಗುಟುರು ಹಾಕುತ್ತಿದ್ದದೂ ಬಿಟ್ಟರೆ ಕಾಂಗ್ರೆಸ್ ಹೈಕಮಾಂಡ್‌ನ ಯಾರೋರ್ವರೂ ಆಗಿರಬಹುದಾದ ಅಥವಾ ಆಗದೇ ಇರುವ ಒಪ್ಪಂದದ ಬಗ್ಗೆ ತುಟಿಬಿಚ್ಚಿರಲೇ ಇಲ್ಲ. ಒಪ್ಪಂದ ಆಗಿದೆ ಎಂದೂ ಹೇಳಲಿಲ್ಲ. ಆಗಲಿಲ್ಲ ಎಂದೂ ಹೇಳಲಿಲ್ಲ. ಹೀಗಾಗಿ ಇದೊಂದು ಪರಮ ರಹಸ್ಯವಾಗಿಯೇ ಕಾಡುತ್ತಿತ್ತು.

ಈಗ ರಹಸ್ಯದ ಬುಟ್ಟಿ ತೆರೆದಿದೆ. ಒಪ್ಪಂದ ಆಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ನೀಡಿ ಎಂದು ಹೈಕಮಾಂಡ್ ಕೇಳಿದೆ. ಮಾತು ಕೊಟ್ಟಂತೆ ಡಿ.ಕೆ. ಶಿವಕುಮಾರ್ ಅವರನ್ನೇ ಮುಂದಿನ ೨ ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿಸುವುದು ಪಕ್ಕಾ ಆಗಿದೆ. ಗಮನಾರ್ಹ ಎಂದರೆ ರಾಜಕೀಯದಲ್ಲಿ ತನ್ನ ಸಿದ್ದಾಂತಗಳಿಗೆ ಎಂದೂ ವಿರೋಧಿಯಾಗದ ಸಿದ್ದರಾಮಯ್ಯ ಯಾಕೆ ಹಠ ಹಿಡಿದು ಹೆಚ್ಚುವರಿ ೬ ತಿಂಗಳನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಳೆದರು. ? ಒಪ್ಪಂದ ಆಗಿದ್ದೇ ಆದಲ್ಲಿ ಸಿದ್ದರಾಮಯ್ಯ ಕೂಡ ಕೊಟ್ಟ ಮಾತಿಗೆ ತಕ್ಕಂತೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬಹುದಿತ್ತು.

ಅಧಿಕಾರ ಎಂಬುದು ಹಾಗೆಯೇ. ಒಮ್ಮೆ ಕುಳಿತ ಮೇಲೆ ಜಪ್ಪಯ್ಯ ಎಂದರೂ ಬಿಟ್ಟುಕೊಡಲು ಮನಸ್ಸು ಬರುವುದಿಲ್ಲ. ರಾಜಕೀಯದಲ್ಲಿ ಅದು ಮತ್ತಷ್ಟು ಹೆಚ್ಚು. !

ಇಲ್ಲೊಂದು ಗಮನಾರ್ಹ ಅಂಶವಿದೆ. ಪ್ರಭಾವೀ ಸಿದ್ದರಾಮಯ್ಯ ಅವರೇ ಈಗ ಯಾವದೇ ಹಠ ಮಾಡದೇ, ತಾಳ್ಮೆ ಕಳೆದುಕೊಳ್ಳದೇ, ರಗಳೆ ಮಾಡದೇ ಬಹಳ ವಿನಮ್ರತೆಯಿಂದ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತಿದ್ದಾರೆ. ಕೊಡಲೇಬೇಕು ಎಂಬುದು ನಿಜವಾದರೂ ಯಾವುದೇ ತಕರಾರನ್ನು ಹೈಕಮಾಂಡ್ ವಿರುದ್ಧವಾಗಿ ಸಿದ್ದರಾಮಯ್ಯ ಅವರಂಥ ಮುತ್ಸದಿ ನಾಯಕ ಮಾಡಲಿಲ್ಲ. ಮುಖ್ಯಮಂತ್ರಿ ಹುದ್ದೆಯನ್ನು ಬೇರೆ ಯಾರಿಗೂ ಬಿಟ್ಟುಕೊಡುವುದಿಲ್ಲ ಎಂದು ಹಠಹಿಡಿದಿದ್ದರೆ ಹೈಕಮಾಂಡ್ ಕೂಡ ಅಸಹಾಯಕ ಆಗುವಂಥ ಸ್ಥಿತಿಯಿತ್ತು. ಆದರೆ ಸಿದ್ದರಾಮಯ್ಯ ಹಾಗೇ ಮಾಡದೇ ಹೈಕಮಾಂಡ್ ಸೂಚನೆಗೆ ಮನ್ನಣೆ ನೀಡಿ ರಾಜಕೀಯ ಪ್ರಬುದ್ದತೆ ತೋರಿದ್ದಾರೆ. ತಾನು ಏನೇ ರಗಳೆ ಮಾಡಿದರೂ ಅದು ಭವಿಷ್ಯದಲ್ಲಿ ತನಗೆ ಮಾತ್ರವಲ್ಲ, ತನ್ನ ಮಗ ಯತೀಂದ್ರ ಸೇರಿದಂತೆ ತನ್ನ ಹಿಂದಿರುವ ಬೆಂಬಲಿಗ ಸಚಿವ, ಶಾಸಕರಿಗೂ ಮಾರಕವಾಗುತ್ತದೆ ಎಂಬ ದೂರದೃಷ್ಟಿಯಿಂದ ಸಿದ್ದರಾಮಯ್ಯ ರಾಜಕೀಯ ಕ್ಲೆöÊಮ್ಯಾಕ್ಸ್ನಲ್ಲಿ ಬುದ್ದಿವಂತಿಕೆ ತೋರಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಸಮಾಧಾನ ಚಿತ್ತದಿಂದಲೇ ವಿದಾಯ ಹೇಳಲು ನಿರ್ಧರಿಸಿದಂತಿದೆ.

೧೯೭೮ ರಲ್ಲಿ ಮೈಸೂರಿನಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ರಾಜಕೀಯಕ್ಕೆ ಬಂದ ಅಂದಿನ ವಕೀಲ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿ, ರಾಷ್ಟಿçÃಯ ಕಾಂಗ್ರೆಸ್‌ನಲ್ಲಿಯೂ ಗಮನಾರ್ಹವಾಗಿ ಗುರುತಿಸಿಕೊಂಡದ್ದು ಸಾಧಾರಣ ಸಾಧನೆಯೇನಲ್ಲ. ದೇವರಾಜ ಅರಸು ಅವರ ಅತೀ ದೀರ್ಘ ದಿನಗಳ ಕಾಲದ ಮುಖ್ಯಮಂತ್ರಿ ಎಂಬ ದಿ. ದೇವರಾಜ ಅರಸು ಅವರ ದಾಖಲೆ ಮುರಿದದ್ದು (೭ ವರ್ಷ ೨೪೦ ದಿನಗಳು) ಸಿದ್ದರಾಮಯ್ಯ ಅವರ ಹೆಗ್ಗಳಿಕೆ. ಅಂತೆಯೇ ದೇಶದಲ್ಲಿಯೇ ೧೬ ಸಲ ಬಜೆಟ್ ಮಂಡಿಸಿದ ದಾಖಲೆಗೆ ಪಾತ್ರರಾದ ಆರ್ಥಿಕ ಸಚಿವ ಎಂಬ ಕೀರ್ತಿಯೂ ಸಿದ್ದರಾಮಯ್ಯ ಅವರದ್ದು. ಅಷ್ಟು ಮಾತ್ರವೇ ಅಲ್ಲ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ದೇಶದಲ್ಲಿಯೇ ಪ್ರಥಮ ಬಾರಿಗೆ ಬಹಳ ದೊಡ್ಡ ರೀತಿಯಲ್ಲಿ ಉಚಿತ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ ಸರ್ಕಾರ ಎಂಬ ಕೀರ್ತಿಗೂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.

ಬಹುಷಃ ಸಿದ್ದರಾಮಯ್ಯ ಅವರಿಗೆ ಈಗ ಮುಗಿದ ಅವಧಿಯೇ ಮುಖ್ಯಮಂತ್ರಿಯಾಗಿ ಕೊನೇ ಅವಧಿಯಾಗಬಹುದು. ೨೦೨೮ ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಖಚಿತವಾಗಿ ಹೇಳುವುದು ಕಷ್ಟ. ಆ ಸಂದರ್ಭ ಆಗ ಕಾಂಗ್ರೆಸ್ ಮುಖ್ಯಮಂತ್ರಿಯಾಗಿರುವವರು ಮತ್ತು ಆಗ ಕೆಪಿಸಿಸಿ ಅಧ್ಯಕ್ಷರಾಗಿರುವವರು ಕಾಂಗ್ರೆಸ್ ಗೆಲುವಿನ ಆಧಾರದಲ್ಲಿ ತಾವೇ ಮುಖ್ಯಮಂತ್ರಿಯಾಗಬೇಕೆAದು ಬಯಸುವುದು ಸಹಜ. ಸಿದ್ದರಾಮಯ್ಯ ಅವರ ಇಳಿವಯಸ್ಸನ್ನು ಪರಿಗಣಿಸಿ ಹೊಸಬ್ಬರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ನಿರ್ಧಾರವನ್ನು ಹೈಕಮಾಂಡ್ ತಳೆದದ್ದೇ ಆದಲ್ಲಿ ಸಿದ್ದರಾಮಯ್ಯ ಪಾಲಿಗೆ ಸಿಎಂ ಹುದ್ದೆ ಮರೀಚಿಕೆಯಾಗಲಿದೆ. ಹೀಗಾಗಿ ಸಿದ್ದರಾಮಯ್ಯ ಇನ್ನು ಮುಖ್ಯಮಂತ್ರಿಯಾಗುವೆ ಎಂಬ ಕನಸು ಕಾಣುವುದು ಕಷ್ಟ.

ಆದರೂ, ಬಿಜೆಪಿಯ ಯಡಿಯೂರಪ್ಪ ಹೊರತುಪಡಿಸಿದಂತೆ ಕರ್ನಾಟಕದಲ್ಲಿ ಮಾಸ್ ಲೀಡರ್ ಅಂಥ ಯಾರಾದರೂ ಗುರುತಿಸಿಕೊಂಡಿದ್ದರೆ ಖಂಡಿತವಾಗಿಯೂ ಅದು ಸಿದ್ದರಾಮಯ್ಯ ಅವರೇ ಎನ್ನುವುದು ವಾಸ್ತವ. ಕರ್ನಾಟಕದಲ್ಲಿ ಯಾವುದೇ ಪ್ರಾಂತ್ಯಕ್ಕೆ ಹೋದರೂ ಸಿದ್ದರಾಮಯ್ಯ ಅವರಿಗೆ ಬೆಂಬಲಿಗರಿದ್ದಾರೆ. ಅಹಿಂದ ವರ್ಗದಂತೆಯೇ ಇತರ ಸಮುದಾಯಗಳಲ್ಲಿಯೂ ಸಿದ್ದರಾಮಯ್ಯ ಅವರಿಗೆ ಮತಬ್ಯಾಂಕ್ ಗಟ್ಟಿಯಾಗಿದೆ.

ಯಡಿಯೂರಪ್ಪ ಅವರಿಗೂ ಇಂಥದ್ದೊAದು ಇಮೇಜ್ ಕರ್ನಾಟಕದಲ್ಲಿತ್ತು. ದೇವರಾಜ ಅರಸು, ವೀರೇಂದ್ರ ಪಾಟೀಲ್ ಬಿಟ್ಟರೆ ಯಡಿಯೂರಪ್ಪ, ಸಿದ್ದರಾಮಯ್ಯ ಅವರುಗಳೇ ಮಾಸ್ ಲೀಡರ್ ಎಂಬ ಖ್ಯಾತಿಗೆ ಕಾರಣರಾದವರು. ಯಡಿಯೂರಪ್ಪ ಬಿಜೆಪಿಯ ಮುಖ್ಯವಾಹಿನಿಯಿಂದ ತೆರೆಮರೆಗೆ ಸರಿದ ಮೇಲೆ ರಾಜ್ಯದಲ್ಲಿ ಆ ಮಟ್ಟಿಗಿನ ಮಾಸ್ ಲೀಡರ್ ಇಲ್ಲದೇ ಬಿಜೆಪಿ ಹೇಗೆ ಮಂಕಾಗಿದೆಯೇ ಹಾಗೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ತೆರೆಮರೆಗೆ ಸರಿದ ಮೇಲೆ ಕಾಂಗ್ರೆಸ್ ಕಥೆಯೂ ಇಷ್ಟೇ ಎಂಬAತಾಗುವ ಸಾಧ್ಯತೆ ಇದೆ. ಮಾಸ್ ಲೀಡರ್ ವರ್ಚಸ್ಸಿನ ಮತ್ತೋರ್ವ ನಾಯಕ ಕಾಂಗ್ರೆಸ್ ನಲ್ಲಿ ಕಾಣಸಿಗುವುದು ಸದ್ಯದ ದಿನಗಳಲ್ಲಿ ಕಷ್ಟ.

ಅಂತೆಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ತನ್ನ ಸಚಿವ ಸಂಪುಟದ ಮಂತ್ರಿಗಳನ್ನು ಗೌರವಿಸುತ್ತಿದ್ದ ರೀತಿಯೂ ಮಾದರಿಯಾಗಿಯೇ ಇದೆ. ಯಾರ ಅರ್ಹತೆ ಏನಿದೆ ಎಂದು ತಿಳಿದುಕೊಂಡು ಅಂಥವರಿಗೆ ಅಂಥ ಹುದ್ದೆಯನ್ನೇ ನೀಡಿ ಗೌರವಿಸಿದ್ದು ಸಿದ್ದರಾಮಯ್ಯ ಚಾಣಾಕ್ಷö್ಯತನಕ್ಕೆ ನಿದರ್ಶನ. ಕಾನೂನು ವಿಚಾರದಲ್ಲಿ ಸಾಕಷ್ಟು ಜ್ಞಾನವಿದ್ದ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಕಾನೂನು ಸಚಿವರನ್ನಾಗಿಸುವ ಬದಲಿಗೆ ತನ್ನ ಕಾನೂನು ಸಲಹೆಗಾರರನ್ನಾಗಿ ಮಾಡಿದ್ದಲ್ಲದೇ, ಅವರಿಗೆ ಕ್ಯಾಬಿನೆಟ್ ಮಟ್ಟದ ಸೌಲಭ್ಯ ನೀಡಿ ಹತ್ತಿರದಲ್ಲಿಯೇ ಇರಿಸಿಕೊಂಡ ರೀತಿ ಗಮನಾರ್ಹ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಷ್ಟೂ ದಿನ ರಾಜಕೀಯ ತಂತ್ರಗಾರಿಕೆಯನ್ನು ಸಾಕಷ್ಟು ಮಾಡಿದ್ದರು. ಎದುರಾಳಿಗಳಿಗೆ ಬಿಸಿಮುಟ್ಟಿಸಿದ್ದರು. ಪಕ್ಷದೊಳಗಿನ ಎದುರಾಳಿಗಳಿಗೆ ಚಳಿ ಬಿಡಿಸಿದ್ದರು. ಪ್ರಧಾನಿ ಮೋದಿಯವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ವಿಪಕ್ಷ ಮುಖಂಡರಲ್ಲಿ ಸಿದ್ದರಾಮಯ್ಯ ಕೂಡ ಆಗ್ರಸ್ಥಾನದಲ್ಲಿರುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಷ್ಟೂ ದಿನ ಜನಸಾಮಾನ್ಯರೊಂದಿಗೆ ಬೆರೆತರು, ರಾಜ್ಯವ್ಯಾಪಿ ಸಂಚರಿಸಿ ಎಲ್ಲರ ನೋವು ಆಲಿಸಿದ್ದರು. ಆ ಮೂಲಕ ಯಾರೂ ಸರಿಗಟ್ಟಲಾಗದ ಸಮುದಾಯದ ನಾಯಕ ಎನಿಸಿಕೊಂಡರು. ವಿಶೇಷವಾಗಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ವರ್ಗಕ್ಕೆ ಸಿದ್ದರಾಮಯ್ಯ ಅವರೇ ನಿಜವಾದ ಶಕ್ತಿ.

ರಾಜ್ಯಸಭಾ ಸದಸ್ಯರಾಗಿ ಸಿದ್ದರಾಮಯ್ಯ ದೆಹಲಿಗೆ ಹೋಗಲು ಅವಕಾಶ ಸಿಕ್ಕಬಹುದು. ಆದರೆ ಸಿದ್ದರಾಮಯ್ಯ ಅವರಿಗೆ ರಾಷ್ಟç ರಾಜಕೀಯ ಖಂಡಿತಾ ಒಗ್ಗದು. ಜನರೊಂದಿಗೆ ಬೆರೆತು ರಾಜಕೀಯ ಮಾಡುವ ನೇತಾರ ದೆಹಲಿಯ ರಾಜಕೀಯದ ಅಲೆಯಲ್ಲಿ ಈಜಿ ಜೈಸುವುದು ಕಷ್ಟ.

ಇಂಥ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ಮಂದಿನ ನಡೆ ಕುತೂಹಲಕಾರಿ. ಮುಖ್ಯಮಂತ್ರಿಯಾಗಿದ್ದ ದಿನಗಳಂತೆಯೇ ಭವಿಷ್ಯದಲ್ಲಿಯೂ ಸಿದ್ದರಾಮಯ್ಯ ತೋರುವ ರಾಜಕೀಯ ನಡೆ ಕರ್ನಾಟಕದ ರಾಜಕೀಯದ ಪಾಲಿಗೆ ಎದುರು ನೋಡುವಂಥ ದಿನಗಳಾಗಿದೆ.

ಯಾಕೆಂದರೆ, ಇನ್ನು ಮುಂದಿನದ್ದು ಡಿ.ಕೆ.ಶಿವಕುಮಾರ್ ಯುಗ. ಹೀಗಾಗಿಯೇ ಕರ್ನಾಟಕದ ಕಾಂಗ್ರೆಸ್ ಮಾತ್ರವಲ್ಲ ಕರ್ನಾಟಕದ ರಾಜಕೀಯವೇ ಈಗ ಮತ್ತೊಂದು ಮಗ್ಗಲು ಬದಲಾಯಿಸಿಕೊಂಡು ಮುಂದೇನು ಎಂಬ ಪ್ರಶ್ನೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದಲ್ಲಿ ಅದು ರಾಜ್ಯ ಮತ್ತು ಕಾಂಗ್ರೆಸ್ ಮೇಲೆ ಬೀರುವ ಪರಿಣಾಮಗಳೇನು? ಅಕಸ್ಮಾತ್ ೪ ಉಪಮುಖ್ಯಮಂತ್ರಿಗಳನ್ನು ಹೈಕಮಾಂಡ್ ನೇಮಿಸಿದರೆ ಶಿವಕುಮಾರ್ ಆಡಳಿತದ ಮೇಲಿನ ಪರಿಣಾಮಗಳೇನು?

(ನಾಳಿನ ಸಂಚಿಕೆಯಲ್ಲಿ...)