ವೀರಾಜಪೇಟೆ: ವೀರಾಜಪೇಟೆ ನಗರದ ವಿವಿಧ ಮಸೀದಿಗÀಳಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ನಮಾಝ್ ಹಾಗೂ ಪ್ರವಚನ ನಡೆಯಿತು.
ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಮೌ. ಹಾರಿಸ್ ಬಾಖವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಮೌ. ಶುಹೈಬ್ ಫೈಝಿ, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಮ್ನಲ್ಲಿ ಮೌ. ಹಸೀಬ್ ಶರೀಫ್, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮೌ. ಮುಝಮ್ಮಿಲ್, ಕ್ಲಾಕ್ ಟವರ್ ಸಮೀಪದ ಮುರುಡೇಶ್ವರ್ ನವಾಯತ್ ಮಸೀದಿಯಲ್ಲಿ ಮೌ ಮಖ್ಸೂದ್ ಅಹಮದ್, ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ. ಝಾಹಿದ್, ನೆಹರು ನಗರ ರಸ್ತೆಯ ಮಸ್ಜಿದ್-ಎ-ರಹೀಲ್ನಲ್ಲಿ ಮೌ. ಅಬೂತಾಲಿಬ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮೌ. ಹನೀಫ್ ಫೈಝಿ ನಮಾಝ್ ಹಾಗೂ ಪ್ರವಚನಕ್ಕೆ ನೇತೃತ್ವ ವಹಿಸಿದ್ದರು.
ಗೋಣಿಕೊಪ್ಪ ರಸ್ತೆಯ ವಿದ್ಯಾನಗರದ ಬ್ರೆöÊಟ್ ಕ್ಯಾಂಪಸ್ನ ಈದ್ಗಾಹ್ನಲ್ಲಿ ಮೌ ಝಕರಿಯಾ ನದ್ವಿ , ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿಯಲ್ಲಿ ಮುಹಮ್ಮದ್ ಅಸ್ಲಮ್ ಮೌಲವಿ ಪ್ರವಚನ ನೀಡಿದರು. ನಮಾಝ್ ನಂತರ ಸಮುದಾಯದವರು ಪರಸ್ಪರ ಶುಭಾಶಯವನ್ನು ಹಂಚಿ ಮೆರವಣಿಗೆಯಲ್ಲಿ ತರಳಿ ಖಬರಸ್ಥಾನದಲ್ಲಿ ಅಗಲಿದ ಹಿರಿಯರಿಗೆ ಗೌರವ ಸಲ್ಲಿಸಿದರು.
ಕುಶಾಲನಗರ: ಕುಶಾಲನಗರ ಪಟ್ಟಣ ವ್ಯಾಪ್ತಿಯ ಮಸೀದಿಗಳಲ್ಲಿ ಬಕ್ರಿದ್ ಹಬ್ಬ ಆಚರಣೆ ನಡೆಯಿತು.
ಸ್ಥಳೀಯ ಜಾಮಿಯಾ ಹಿಲಾಲ್ ಮತ್ತು ಬಡಾವಣೆಗಳ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.