ಐಗೂರು, ಮೇ ೨೮: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ - ಯಡವನಾಡು ಸಂಪರ್ಕ ರಸ್ತೆಯ ಚೈನ್‌ಗೇಟ್ ಸಮೀಪ ರಾತ್ರಿ ವೇಳೆ ಬೃಹತ್ ಗಾತ್ರದ ಹೆಬ್ಬಾವೊಂದು ರಸ್ತೆ ದಾಟುತ್ತಿದ್ದ ದೃಶ್ಯ ಕಂಡು ವಾಹನ ಸವಾರರು ಆತಂಕಗೊAಡ ಘಟನೆ ನಡೆಯಿತು.

ಯಡವಾರೆ ನಿವಾಸಿ ಕಾಫಿ ಬೆಳಗಾರ ಮಚ್ಚಂಡ ಪ್ರಕಾಶ್ ಬೆಳ್ಳಿಯಪ್ಪ ಅವರು ತಮ್ಮ ಕುಟುಂಬ ಸಮೇತ ಜೀಪಿನಲ್ಲಿ ರಾತ್ರಿ ಸುಮಾರು ೯ ಗಂಟೆ ವೇಳೆಗೆ ಕುಶಾಲನಗರದಿಂದ ಮನೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ರಸ್ತೆ ಮಧ್ಯೆ ಹೆಬ್ಬಾವೊಂದು ದಾಟುತ್ತಿದ್ದ ದೃಶ್ಯ ಕಂಡುಬAದಿದೆ. ಸುಮಾರು ೧೨ ರಿಂದ ೧೩ ಅಡಿ ಉದ್ದದ ಹೆಬ್ಬಾವು ನಿಧಾನವಾಗಿ ರಸ್ತೆ ದಾಟಿ ಅರಣ್ಯದೊಳಗೆ ತೆರಳಿತು. ಪ್ರಕಾಶ್ ಅವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.