ಮಡಿಕೇರಿ, ಮೇ ೨೯: ದಕ್ಷಿಣ ಭಾರತದ ಆದಿವಾಸಿಗಳ ಬದುಕು, ಆಚಾರ, ವಿಚಾರ, ಪದ್ಧತಿ, ಪರಂಪರೆ ಕುರಿತು ದಾಖಲೀಕರಣ ಮಾಡುವ ನಿಟ್ಟಿನಲ್ಲಿ ತಿತಿಮತಿ, ದೇವರಪುರ ಮುಂತಾದ ಕಡೆಗಳಲ್ಲಿ ಆದಿವಾಸಿಗಳ ಹಾಡಿಗಳಿಗೆ ತೆರಳಿ ವಿಶೇಷ ಕುಂಡೆ ಹಬ್ಬ ಅಥವಾ ಬೇಡು ಹಬ್ಬದ ಕುರಿತು ಯುನೆಸ್ಕೋ ಪ್ರಶಸ್ತಿ ವಿಜೇತ ಸಂಶೋಧನಾ ಸಂಘಟನೆಯಿAದ ಸಾಕ್ಷö್ಯ ಚಿತ್ರ ಚಿತ್ರೀಕರಣ ಮಾಡಲಾಯಿತು.

ಈಗಾಗಲೇ ಕೇರಳದ ಆದಿವಾಸಿಗಳ ಬದುಕಿನ ಬಗ್ಗೆ ದಾಖಲೀಕರಣ ಮಾಡಲಾಗಿದ್ದು, ದಕ್ಷಿಣ ಭಾರತದಲ್ಲಿ ವಿನಾಶದ ಅಂಚಿನಲ್ಲಿರುವ ಆದಿವಾಸಿಗಳ ಬಗ್ಗೆ ಸಾಕ್ಷö್ಯ ಚಿತ್ರ ಮಾಡಲಾಗುತ್ತಿದೆ ಎಂದು ಂಖPಔ ಸಂಶೋಧನಾ ತಂಡದ ಮುಖ್ಯಸ್ಥ ಡಾ.ವಿಶಾಕ್ ‘ಶಕ್ತಿ‘ಗೆ ತಿಳಿಸಿದ್ದಾರೆ.

ಕ್ರಿಯೇಟಿವ್ ನಿರ್ದೇಶಕ ರಿಚರ್ಡ್ ಮ್ಯಾಥ್ಯು, ಛಾಯಾ ಚಿತ್ರಗ್ರಾಹಕರಾದ ಯದು ಹಾಗೂ ವಿಮಲ್ ಹರಿ ತಂಡದ ಆಡಳಿತ ವಿಭಾಗದ ಮುಖ್ಯಸ್ಥ ಅಕ್ಷಯ್ ಅಗಸ್ಟಿನ್ ತಂಡ ಮತ್ತಷ್ಟು ಮಾಹಿತಿ ಸಂಗ್ರಹಣೆಗೆ ಮುಂದೆಯೂ ಜಿಲ್ಲೆಗೆ ಆಗಮಿಸಲಿದೆ.

ತಂಡದೊAದಿಗೆ ಆಕ್ಸ್ಫರ್ಡ್ ವಿಶ್ವ ವಿದ್ಯಾಲಯದ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಐಶ್ವರ್ಯ ಸುನೋದ್ ಮತ್ತಿತರರು ಇದ್ದರು. - ಟಿ.ಎಲ್.ಎಸ್