ಮಡಿಕೇರಿ, ಮೇ ೩೧: ೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿರುವ ವಸತಿ ಶಾಲೆ/ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರು/ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅದರಂತೆ ಅರ್ಹ ಅಭ್ಯರ್ಥಿಗಳು ಜೂನ್ ೨ ರೊಳಗೆ ಸೂಕ್ತ ದಾಖಲೆಗಳೊಂದಿಗೆ ಈ ಕಚೇರಿ/ ವಸತಿ ಶಾಲೆ/ ಕಾಲೇಜುಗಳಲ್ಲಿ ಅರ್ಜಿ ಪಡೆಯಬಹುದಾಗಿದೆ.
ಅತಿಥಿ ಶಿಕ್ಷಕರು/ ಉಪನ್ಯಾಸಕರನ್ನು ಷರತ್ತುಗಳ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು: ಅತಿಥಿ ಶಿಕ್ಷಕರು/ ಉಪನ್ಯಾಸಕರನ್ನು ಆಯಾಯ ಹುದ್ದೆಗೆ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆ ಹಾಗೂ ಬೋಧನಾ ಕೌಶಲ್ಯ, ಸೇವಾ ಅನುಭವ, ಆಂಗ್ಲ ಭಾಷಾ ಸಂವಹನ ಕೌಶಲ್ಯತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅತಿಥಿ ಶಿಕ್ಷಕರ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಕಡ್ಡಾಯವಾಗಿ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರಿಗೆ ಮೊದಲನೆ ಆದ್ಯತೆ. ಒಂದು ವೇಳೆ ಅಂತಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಮೆರಿಟ್ ಆಧಾರದ ಮೇಲೆ ಪರಿಗಣಿಸಲಾಗುವುದು. ನೇರ ನೇಮಕಾತಿ ಮೂಲಕ ಖಾಯಂ ಶಿಕ್ಷಕರು/ ಉಪನ್ಯಾಸಕರು ಅಥವಾ ವರ್ಗಾವಣೆ/ ನಿಯೋಜನೆ ಆದೇಶದ ಮೇರೆಗೆ ಕರ್ತವ್ಯಕ್ಕೆ ಹಾಜರಾದಲ್ಲಿ ಅತಿಥಿ ಶಿಕ್ಷಕರು/ ಉಪನ್ಯಾಸಕರನ್ನು ತಕ್ಷಣವೇ ಬಿಡುಗಡೆಗೊಳಿಸಲಾಗುವುದು.
ಅರ್ಜಿಗಳನ್ನು ಪಡೆಯಬಹುದಾದ ವಸತಿ ಶಾಲೆ/ ಕಾಲೇಜುಗಳ ವಿವರ: ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ದೂ: ೦೮೨೭೨-೨೨೫೫೩೧, ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಕಾಲೇಜು, ಬಸವನಹಳ್ಳಿ, ಕುಶಾಲನಗರ ತಾಲೂಕು. ದೂ: ೯೮೪೫೬೫೯೯೦೯, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ, ಕುಶಾಲನಗರ ತಾಲೂಕು. ದೂ. ೯೯೦೧೨೬೭೬೩೫, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಲೂರು-ಸಿದ್ದಾಪುರ, ಸೋಮವಾರಪೇಟೆ ತಾಲೂಕು. ದೂ. ೯೭೪೧೯೫೮೦೧೨, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ನಾಪೊಕ್ಲು, ಮಡಿಕೇರಿ ತಾಲೂಕು. ದೂ. ೯೬೮೬೫೯೭೪೪೮, ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ತೊಳೂರು-ಶೆಟ್ಟಳ್ಳಿ, ಸೋಮವಾರಪೇಟೆ ತಾಲೂಕು. ದೂ. ೯೯೪೫೭೦೭೨೩೪, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಭಾಗಮಂಡಲ, ಮಡಿಕೇರಿ ತಾಲ್ಲೂಕು. ದೂ.೯೬೧೧೩೦೭೬೪೬, ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು, ಗರಗಂದೂರು, ಸೋಮವಾರಪೇಟೆ ತಾಲೂಕು. ದೂ. ೮೧೦೫೬೫೭೪೫೧, ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಿತಿಮತಿ, ವೀರಾಜಪೇಟೆ ತಾಲೂಕು. ದೂ. ೭೮೯೨೭೯೫೬೨೪, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಹುದಿಕೇರಿ, ಪೊನ್ನಂಪೇಟೆ ತಾಲೂಕು ದೂ. ೮೮೬೧೫೭೨೨೧೫ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಸುಂಟಿಕೊಪ್ಪ, ಕುಶಾಲನಗರ ತಾಲೂಕು. ದೂ. ೯೪೮೨೩೫೯೮೧೨ ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ತಿಳಿಸಿದ್ದಾರೆ.