ನಾಪೋಕ್ಲು, ಮೇ ೩೧: ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ, ಪರಂಪರೆ ತೀರಾ ವಿಭಿನ್ನ ಹಾಗೂ ವಿಶಿಷ್ಟತೆಯಿಂದ ಕೂಡಿದ್ದು ಅದಕ್ಕೆ ಹೊಂದಿದAತೆ ಶ್ರೀಮಂತ ಕಲೆಯನ್ನು ಕೊಡವ ಜನಾಂಗ ಸಾವಿರಾರು ವರುಷಗಳಿಂದ ಆಚರಿಸಿ, ಉಳಿಸಿ, ಬೆಳೆಸಿಕೊಂಡು ಬಂದಿದೆ ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರೂ, ನೆಲಜಿ ಇಗ್ಗುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಮುಂಡAಡ ಸಿ. ನಾಣಯ್ಯ ಹೇಳಿದರು.

ನೆಲಜಿ ದವಸ ಭಂಡಾರದಲ್ಲಿ ಆಯೋಜಿಸಿದ ಶೀ ಇಗ್ಗುತ್ತಪ್ಪ ಭಗವತಿ ಆಟ್-ಪಾಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಾಂಸ್ಕೃತಿಕ ಕಲೆಯನ್ನು ಮೈಗೂಡಿಸಿಕೊಂಡು ಹಬ್ಬ ಹರಿದಿನಗಳನ್ನು ಆಚರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಹಿರಿಯ ಜೀವಗಳು ಕಣ್ಮರೆಯಾಗಿದ್ದು, ಇಂದಿನ ಯುವ ಜನತೆ ಆಧುನಿಕತೆಯ ನೆಪದಲ್ಲಿ ಕೊಡವ ಜನಾಂಗದ ಸಿರಿವಂತ ಕಲೆಯನ್ನು ರೂಢಿಸಿಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ನಿರ್ಲಕ್ಷö್ಯ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮದ ಪುಟಾಣಿಗಳನ್ನು ಗುರುತಿಸಿ, ಶಿಬಿರವನ್ನು ಆಯೋಜಿಸುವ ಪ್ರಯತ್ನಕ್ಕೆ ಕೈಜೋಡಿಸಿದ ಗ್ರಾಮದ ಕಲಾ ಸಾಧಕರಾದ ನಾಪನೆರವಂಡ ಸೋಮಯ್ಯ, ಮಣವಟ್ಟಿರ ಅರುಣ್ ಪಳಂಗಪ್ಪ, ಮಣವಟ್ಟಿರ ನಂದ ಭೀಮಯ್ಯ, ಮಣವಟ್ಟಿರ ಪ್ರವೀಣ್ ಸಂಗಡಿಗರ ಸಂಕಲ್ಪ ಮತ್ತು ಸಾಧನೆಯನ್ನು ಶ್ಲಾಘಿಸಿದ ನಾಣಯ್ಯ ಅವರು, ಇಂದು ಕೊಡವ ಜನಾಂಗದ ಸಂಖ್ಯೆ ಮತ್ತು ಆಚರಣೆಯಲ್ಲಿದ್ದ ಅದ್ಬುತ ಕಲೆ ಮತ್ತು ಸಂಸ್ಕೃತಿ ಅಳಿವಿನಂಚಿನಲ್ಲಿದ್ದು, ಜಗತ್ತಿನಲ್ಲಿಯೇ ಗುರುತಿಸಿಕೊಂಡಿರುವ ಕೊಡವ ಜನಾಂಗದ ಸಂಖ್ಯೆ ಯಾವುದೇ ಕಾರಣಕ್ಕೂ ಕಡಿಮೆಯಾಗದಂತೆ ಮತ್ತು ಆಚರಣೆಯಲ್ಲಿದ್ದ ಸಂಸ್ಕೃತಿ, ಪರಂಪರೆ ಪದ್ಧತಿಗಳು ಅಳಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯ ಮೇಲೆ ಇದೆ ಮತ್ತು ಕೊಡವ ಜನಾಂಗದ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕೆಂದು ತಿಳಿಸಿದರು.

ಇತ್ತೀಚೆಗೆ ನಗರಗಳಲ್ಲಿ ವಾಸಿಸುತ್ತಿರುವ ಕೊಡವ ಜನಾಂಗದ ಪೋಷಕರು ಯುವ ಪೀಳಿಗೆಯನ್ನು ಕಲೆಯನ್ನು ಕರಗತ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದರೂ, ಪ್ರಮುಖ ಪಾತ್ರ ವಹಿಸಬೇಕಾಗಿದ್ದ ಗ್ರಾಮೀಣ ಭಾಗದ ಪೋಷಕರು ಮತ್ತು ಯುವ ಪೀಳಿಗೆ ನಿರಾಸಕ್ತಿ ತೋರುತ್ತಿರುವುದು ತೀರಾ ವಿಷಾದನೀಯ ಎಂದರು.

ನಾಪೋಕ್ಲು ಕೊಡವ ಸಮಾಜದ ವತಿಯಿಂದ ಆಯೋಜಿಸಲಾದ ಆಟ್-ಪಾಟ್ ಶಿಬಿರದಲ್ಲಿ ಸುಮಾರು ೭೮ ಯುವಕರಿಗೆ ಕಲೆಯ ಬಗ್ಗೆ ತರಬೇತಿಯನ್ನು ನೀಡಲಾಯಿತು.

ಊರ ತಕ್ಕಮುಖ್ಯಸ್ಥರಾದ ನಾಪನೆರವಂಡ ಪೊನ್ನಪ್ಪ, ಬದಂಜೆಟ್ಟಿರ ನಾಣಯ್ಯ, ಕುಂಜಪ್ಪ ಮತ್ತು ಕಯ್ಯಂದಿರ ಉತ್ತಯ್ಯ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.

ಶಿಬಿರದ ಪ್ರಮುಖ ತರಬೇತುದರ ನಾಪನೆರವಂಡ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಶಿಬಿರಾರ್ಥಿಗಳಿಗೆ ನಗದು ಪ್ರೋತ್ಸಾಹ ಧನದೊಂದಿಗೆ ನೆನಪಿನ ಕಾಣಿಕೆಯನ್ನು ನೀಡÀಲಾಯಿತು.