ಕುಶಾಲನಗರ, ಮೇ ೩೧: ಸಹಕಾರ ಸಂಘಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಸಾಧ್ಯ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು.
ಕುಶಾಲನಗರದ ಕಲಾಭವನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರ ಸಂಘಗಳು ರೈತರು, ವ್ಯಾಪಾರಿಗಳು ಹಾಗೂ ಉದ್ಯಮಿಗಳ ಪಾಲಿಗೆ ವರದಾನವಾಗಿವೆ. ಹಿಂದೆ ಸಾಲ ಸೌಲಭ್ಯ ಹೊಂದಲು ರಾಷ್ಟಿçÃಕೃತ ಬ್ಯಾಂಕ್ಗಳನ್ನು ಅವಲಂಬಿಸುವAತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಇತ್ತೀಚಿನ ದಶಕಗಳಲ್ಲಿ ಸಹಕಾರ ಕ್ಷೇತ್ರ ವಿಶಾಲವಾಗಿ ತೆರೆದುಕೊಂಡAತೆ ಸಣ್ಣ ಸಣ್ಣ ವರ್ತಕರು, ರೈತರು ಹಾಗೂ ಇನ್ನಿತರೆ ಸಾರ್ವಜನಿಕರು ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಅನುಕೂಲ ಉಂಟಾಗಿದೆ ಎಂದು ಶಶಿಧರ್ ಹೇಳಿದರು.
ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಎನ್. ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಜಿಲ್ಲಾ ವ್ಯಾಪ್ತಿಗೆ ಸಂಬAಧಿಸಿದAತೆ ವಾಲ್ಮೀಕ ಪತ್ತಿನ ಸಹಕಾರ ಸಂಘವನ್ನು ಆರಂಭಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ವಾಲ್ಮೀಕಿ ನಾಯಕ ಸಮುದಾಯವರಿದ್ದು, ಸಹಕಾರ ಸಂಘದ ಸದಸ್ಯತ್ವವನ್ನು ಹೆಚ್ಚಾಗಿ ಹೊಂದುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಸಂಘದ ಮೂಲಕ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಸಕಾಲದಲ್ಲಿ ಮರುಪಾವತಿಸುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆAದು ಕರೆ ನೀಡಿದರು.
ಮೈಸೂರು ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜು ಟಿ. ಕಾಟೂರ ಮಾತನಾಡಿದರು. ಸಂಘದ ಉಪಾಧ್ಯಕ್ಷ ಪಿ.ಟಿ. ಸುರೇಶ್, ನಿರ್ದೇಶಕರುಗಳಾದ ಎಂ.ಜಿ. ಕರಿಯಪ್ಪ, ಸಿದ್ದಲಿಂಗಯ್ಯ, ವೈ.ಟಿ. ಪರಮೇಶ್, ಚಂದನ ಕುಮಾರ್, ಆರ್. ಕೃಷ್ಣ, ಶ್ರೀನಿವಾಸ್ ಕುಮಾರ್, ಎಸ್.ಎಸ್. ಮಂಜುನಾಥ್, ಲಕ್ಷ್ಮಣ ನಾಯಕ, ಪಿ.ಪಿ. ಸುರೇಶ್, ನಾರಾಯಣಸ್ವಾಮಿ, ಮುತ್ತುರಾಜು, ಚೈತ್ರ, ಸೌಂದರ್ಯ, ಶೋಭಾ, ಮಮತಾ ಇದ್ದರು.
ಕೂಡಿಗೆ ಡಯಟ್ನ ಉಪನ್ಯಾಸಕಿ ಬಿ. ಎನ್. ಪುಷ್ಪ ಸ್ವಾಗತಿಸಿದರು. ಶಿಕ್ಷಕ ಬಿ.ಎನ್. ವಸಂತ ಕುಮಾರ್ ನಿರೂಪಿಸಿದರು. ಸಂಘದ ನಿರ್ದೇಶಕ ಚಂದನ ಕುಮಾರ್ ವಂದಿಸಿದರು. ಕಲಾವಿದ ವಿಜಯಕುಮಾರ್ ತಂಡ ಪ್ರಾರ್ಥಿಸಿತು.