ಸಿದ್ದಾಪುರ, ಜೂ. ೧: ಸಕಾಲಕ್ಕೆ ನೀರು ಬಿಡಲಿಲ್ಲ ಎಂಬ ಆರೋಪದಡಿಯಲ್ಲಿ ವ್ಯಕ್ತಿಯೋರ್ವ ಸಿದ್ದಾಪುರದ ಗುಹ್ಯ ಗ್ರಾಮದ ನೀರುಗಂಟಿ ಮೇಲೆ ಹಲ್ಲೆ ನಡೆಸಿದ ಘಟನೆ ಗುಹ್ಯ ಗ್ರಾಮದ ಕೂಡುಗದ್ದೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ನೀರುಗಂಟಿ ಗುಹ್ಯ ಗ್ರಾಮದ ಅಶ್ರಫ್ ಎಂಬವರು ಕೂಡುಗದ್ದೆ ಗ್ರಾಮದಲ್ಲಿ ನೀರು ಬಿಡಲಿಲ್ಲ ಎಂದು ಆರೋಪಿಸಿ ಕೂಡುಗದ್ದೆ ನಿವಾಸಿ ಸತ್ತಾರ್ ಎಂಬತಾ ಕಬ್ಬಿಣದ ರಾಡಿನಿಂದ ಕಾಲಿನ ತೊಡೆಯ ಭಾಗಕ್ಕೆ ಹಾಗೂ ಸೊಂಟಕ್ಕೆ ಹೊಡೆದು ಗಾಯಗೊಳಿಸಿ ಬೆದರಿಕೆ ಒಡ್ಡಿದ್ದಾನೆ ಎಂದು ಅಶ್ರಫ್ ದೂರು ನೀಡಿದ ಮೇರೆಗೆ ಸತ್ತಾರ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.