ಮಡಿಕೇರಿ, ಜೂ. ೧೮ : ಲಯನ್ಸ್ ಅಂತರರಾಷ್ಟಿçÃಯ ಜಿಲ್ಲೆ ೩೧೭ರ ವ್ಯಾಪ್ತಿಗೆ ಒಳಪಡುವ ಕೊಡಗು ಜಿಲ್ಲೆಯ ೧೨ ಲಯನ್ಸ್ ಕ್ಲಬ್‌ಗಳ ಒಕ್ಕೂಟವಾದ 'ರೀಜನ್ ೫'ರ ನೂತನ ಪ್ರಾದೇಶಿಕ ಅಧ್ಯಕ್ಷರಾಗಿ ಮನ್ನಕಮನೆ ಬಾಲಕೃಷ್ಣ ಅವರು ೨೦೨೬-೨೭ನೇ ಸಾಲಿಗೆ ಆಯ್ಕೆಗೊಂಡಿದ್ದಾರೆ. ೨೦೨೬-೨೭ನೇ ಸಾಲಿನ ನೂತನ ಲಯನ್ಸ್ ಜಿಲ್ಲಾ ಗವರ್ನರ್ ತಾರಾನಾಥ್ ಹೆಗ್ಗಾರ್ ಅವರು ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ ಜಿಲ್ಲೆಯ ವಿವಿಧ ವಲಯ ಗಳ ಅಧ್ಯಕ್ಷರುಗಳಾಗಿ ಗೋಣಿಕೊಪ್ಪಲು ಲಯನ್ಸ್ ಕ್ಲಬ್‌ನ ಕೊಂಗAಡ ಅಚ್ಚಯ್ಯ, ನಾಪೋಕ್ಲು ಕ್ಲಬ್‌ನ ಮಾದೆಯಂಡ ಕುಟ್ಟಪ್ಪ ಹಾಗೂ ಮಡಿಕೇರಿ ಕ್ಲಬ್‌ನ ಬೈರೇಟಿರ ಮದನ್ ಮಾದಯ್ಯ ಅವರುಗಳು ನಾಮ ನಿರ್ದೇಶನಗೊಂಡಿದ್ದಾರೆ.

ಕೊಡಗು ಜಿಲ್ಲೆಯಾದ್ಯಂತ ಲಯನ್ಸ್ ಸಂಸ್ಥೆಯ ಮೂಲಕ ಹಮ್ಮಿಕೊಳ್ಳಲಾಗುವ ಸಮಾಜಮುಖಿ ಕಾರ್ಯಕ್ರಮಗಳು, ರಕ್ತದಾನ ಶಿಬಿರಗಳು ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಈ ನೂತನ ನಾಯಕತ್ವವು ಹೊಸ ಚೈತನ್ಯ ತುಂಬಲಿದೆ ಎಂದು ಲಯನ್ಸ್ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.