ಸೋಮವಾರಪೇಟೆ, ಜೂ. ೧೮: ಜಿಲ್ಲೆಯ ವಿವಿಧೆಡೆ ಒಂದು ಸಾವಿರ ಏಕರೆ ಪ್ರದೇಶದಲ್ಲಿ ಯಾಂತ್ರೀಕೃತ ಪದ್ಧತಿಯಡಿ ಭತ್ತದ ಕೃಷಿಯನ್ನು ಕೈಗೊಳ್ಳುವ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚರ್ಚೆ ನಡೆಸಲಾಯಿತು.
ಕುಶಾಲನಗರದಲ್ಲಿರುವ ಯೋಜನೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭತ್ತದ ಕೃಷಿ ಇಳಿಮುಖವಾಗುತ್ತಿರುವ ಬಗ್ಗೆ ಚರ್ಚೆಗಳು ನಡೆದು, ಶ್ರೀ ಕ್ಷೇತ್ರದ ಸಹಾಯದಿಂದ ಜಿಲ್ಲೆಯಲ್ಲಿ ೧ ಸಾವಿರ ಏಕರೆ ಪ್ರದೇಶದಲ್ಲಿ ಯಂತ್ರಶ್ರೀ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.
ಯಾಂತ್ರೀಕೃತ ವಿಧಾನದಲ್ಲಿ ಭತ್ತ ಬೆಳೆಯಬಹುದಾದ ಪ್ರದೇಶಗಳನ್ನು ಗುರುತಿಸುವುದು, ಸ್ಥಳೀಯ ರೈತರ ಸಹಯೋಗದೊಂದಿಗೆ ಯಂತ್ರಶ್ರೀ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಠಲ್ ಸಾಲ್ಯಾನ್, ಕೃಷಿ ವಿಭಾಗದ ನಿರ್ದೇಶಕ ಶೇಖರ್ ಗೌಡ, ಕೃಷಿ ವಿಭಾಗದ ಯೋಜನಾಧಿಕಾರಿ ಬಾಲಕೃಷ್ಣ, ಪುತ್ತೂರು ವಿಭಾಗದ ಸಿಹೆಚ್ಎಸ್ಸಿ ಯೋಜನಾಧಿಕಾರಿ ಮೋಹನ್ ಸೇರಿದಂತೆ ಜಿಲ್ಲಾ ಮೇಲ್ವಿಚಾರಕರು, ಪ್ರಬಂಧಕರು ಇದ್ದರು.