ಶನಿವಾರಸಂತೆ, ಜೂ. ೧೮: ಪಟ್ಟಣದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ೨೦೦೧-೦೨ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ತಮ್ಮ ೨೫ ವರ್ಷದ ಬೆಳ್ಳಿಹಬ್ಬದ ಗುರುವಂದನಾ ಕಾರ್ಯಕ್ರಮವನ್ನು ಶಾಲೆಯಲ್ಲಿ ಸಂಭ್ರಮದಿAದ ಆಚರಿಸಿದರು. ದೂರದೂರದ ಊರುಗಳಲ್ಲಿ ನೆಲೆಸಿದ್ದ ತಮ್ಮ ಗುರುಗಳನ್ನು ಆಹ್ವಾನಿಸಿ, ಅವರನ್ನು ಸನ್ಮಾನಿಸಿ ಗೌರವ ಸಮರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಬಿ. ಥೋಮಸ್ ವಹಿಸಿದ್ದು, ಹಳೇ ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಶುಭ ಹಾರೈಸಿದರು. ಹಳೇ ವಿದ್ಯಾರ್ಥಿ ಉಪನ್ಯಾಸಕ ಎ.ಹೆಚ್. ಚಂದ್ರಕಾAತ್ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳನ್ನು ಹಾಗೂ ಶಾಲೆಯನ್ನು ಸ್ಮರಿಸಿ, ಗುರುತಿಸಿ ಗೌರವಿಸುವುದು ಇಂದಿನ - ಮುಂದಿನ ಪೀಳಿಗೆಯ ಪರಂಪರೆಯಾಗಬೇಕು ಎಂದರು.
ಹಳೇ ವಿದ್ಯಾರ್ಥಿಗಳಾದ ಸುನೀಲ್, ಕವಿತಾ, ವಿಕಾಸ್, ವಿಶ್ವನಾಥ್ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಮುಖ್ಯ ಅತಿಥಿಗಳಾಗಿ ಫಾದರ್ ಫಿಲಿಪ್, ಫಾದರ್ ಅಗಸ್ಟಿನ್, ಶಿಕ್ಷಕರಾದ ಸಿಸ್ಟರ್ ಇಮ್ಮಕ್ಯುಲಟ್, ರೋಹಿಣಿ, ಕಾಂತರಾಜ್, ಗುರುಬಸಪ್ಪ, ಇತರರು ಉಪಸ್ಥಿತರಿದ್ದರು.ಅರ್ಪಿತಾ, ರಾಕೇಶ್, ಅಮೂಲ್ಯ, ವಿಶ್ವನಾಥ್, ಸುಮಲತಾ, ಚಂದ್ರಕಾAತ್ ಕಾರ್ಯಕ್ರಮ ನಿರ್ವಹಿಸಿದರು.