ಕೂಡಿಗೆ, ಜೂ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ದ್ರವ್ಯಕಳಸ ಮಹೋತ್ಸವ ಗಣಪತಿ ಹೋಮದೊಂದಿಗೆ ಭಕ್ತಿಭಾವದಿಂದ ಆರಂಭಗೊAಡಿತು.
ಕೇರಳ ತಂತ್ರಿ ಬ್ರಹ್ಮಶ್ರೀ ಡಾ. ಶ್ರೀನಾಥ್ ಕಾರಯಾಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಹೋತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಮತ್ತು ಪೂಜಾ ಕೈಂಕರ್ಯಗಳು ನಡೆಯಲಿವೆ. ಮಹೋತ್ಸವದ ಮೊದಲ ದಿನ ಗಣಪತಿ ಹೋಮ, ವಾಸ್ತುಬಲಿ, ಉಕ್ಷಿ ಪೂಜೆ, ದೀಪಾರಾಧನೆ, ಪಂಚಕಲಶ ಪೂಜೆ ಸೇರಿದಂತೆ ವಿವಿಧ ಹೋಮ-ಹವನಗಳು ನೆರವೇರಿದವು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್, ಸಮಿತಿ ನಿರ್ದೇಶಕರು ಹಾಗೂ ನೂರಾರು ಗ್ರಾಮಸ್ಥರು ಮತ್ತು ಭಕ್ತಾದಿಗಳು ಪಾಲ್ಗೊಂಡರು.