ಪಾಲಿಬೆಟ್ಟ, ಜೂ. ೧೮: ನಂಜನಗೂಡಿನಲ್ಲಿ ಟ್ರೂ ಯೋಗ ಕೇಂದ್ರ ವತಿಯಿಂದ ಆಯೋಜಿತ ಪ್ರಥಮ ವರ್ಷದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾಲಿಬೆಟ್ಟ ಚೆಶೈರ್ ಹೋಂನ ೮ ವಿಶೇಷಚೇತನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ.
ಸುಮೇಶ್ ಕೆ.ಪಿ. ಪ್ರಥಮ, ಜೈನ್ ಪಾಶ ದ್ವಿತೀಯ, ಆಶಿಕ್ ಹಾಗೂ ಮಂಜು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರಿಗೆ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಯೋಗ ಶಿಕ್ಷಕÀ ಶಿವರಾಜ್ ತರಬೇತಿ ನೀಡುತ್ತಿದ್ದಾರೆ.