ನಾಪೋಕ್ಲು, ಜೂ. ೧೮: ಸಮೀಪದ ಮೂರ್ನಾಡು ಶೌರ್ಯ ತಂಡದ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಬಲಮುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ಸಾಮಾಜಿಕ ಕಾಳಜಿಯನ್ನು ಮೆರೆದರು. ಶೌರ್ಯ ತಂಡದ ಸಂಯೋಜಕಿ ದಿವ್ಯ ಹಾಗೂ ಸೇವಾ ಪ್ರತಿನಿಧಿ ಕಾವೇರಿ ಅವರ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಶಾಲಾ ಆವರಣದಲ್ಲಿದ್ದ ಕಸ-ಕಡ್ಡಿಗಳನ್ನು ತೆರವುಗೊಳಿಸಿ ಪರಿಸರವನ್ನು ಶುಚಿಗೊಳಿಸಲಾಯಿತು.

ಈ ಸಂದರ್ಭ ಹಳೆ ವಿದ್ಯಾರ್ಥಿಗಳಾದ ಪ್ರಶಾಂತ್ ಮುತ್ತಣ್ಣ ಕೋಳಿಮಾಡು, ಮಂಜು, ದಯಾನಂದ ಪೊನ್ನಚನ ಹಾಗೂ ಮಮತಾ ಬಾಕಿಲನ, ಶೌರ್ಯ ತಂಡದ ಸದಸ್ಯರಾದ ದಿವ್ಯ, ಪುಷ್ಪ, ನಿರ್ಮಲ ಮತ್ತು ಅರುಣ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ದಮಯಂತಿ ಹಾಗೂ ಶಿಕ್ಷಕಿ ಸುನಿತಾ ಉಪಸ್ಥಿತರಿದ್ದರು.