ಸೋಮವಾರಪೇಟೆ, ಜೂ. ೧೯: ಇಲ್ಲಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಪಟ್ಟಣದ ಕ್ಲಬ್ ರಸ್ತೆಯಲ್ಲಿರುವ ಸೆಂಟರ್‌ನ ಕಚೇರಿಯಲ್ಲಿ ತಾ. ೨೧ರಂದು ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೬.೩೦ರಿಂದ ೮ ಗಂಟೆಯವರೆಗೆ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಾಗಿ ಈಗಾಗಲೇ ಸೆಂಟರ್‌ನಲ್ಲಿ ಯೋಗ ತರಬೇತಿ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಲ್ಲಿನ ನಿರಂತರ ಯೋಗ ಕೇಂದ್ರದ ವತಿಯಿಂದ ಪಟ್ಟಣದ ಮಾನಸ ಸಭಾಂಗಣದಲ್ಲಿ ತಾ. ೨೧ರಂದು ಬೆಳಿಗ್ಗೆ ೬.೩೦ರಿಂದ ೮ ಗಂಟೆಯವರೆಗೆ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಶಿಕ್ಷಕ ಕಿಬ್ಬೆಟ್ಟ ಗಣೇಶ್ ತಿಳಿಸಿದ್ದಾರೆ.