ಮಡಿಕೇರಿ, ಜೂ. ೧೯ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯಾಪ್ತಿಯಲ್ಲಿ ಇರುವ ಚೆಸ್ಕಾಂ, ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂಗಳನ್ನು ಖಾಸಗಿ ಕಂಪೆನಗಳಿಗೆ ನೀಡುವ ಮೂಲಕ ಖಾಸರೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ಮಡಿಕೇರಿಯ ಸೆಸ್ಕ್ ಕಚೇರಿ ಎದುರು ಅಧಿಕಾರಿಗಳು, ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಡಿಕೇರಿ ವಿಭಾಗಗಳ ಕಾರ್ಯಪಾಲಕ ಅಭಿಯಂತರ ಎಂ. ರಾಮಚಂದ್ರ, ಉಪವಿಭಾಗದ ಕಾರ್ಯಪಾಲಕ ಅಭಿಯಂತರ ವಿನಯ್ ಕುಮಾರ್, ಕುಶಾಲನಗರದ ಮಂಜುನಾಥ, ವೀರಾಜಪೇಟೆಯ ನೀತಾ ನೌಕರರ ಸಂಘದ ತಾಲೂಕು ಸಮಿತಿ ಸದಸ್ಯ ಕೃಷ್ಣರಾಜ್ ವಿಭಾಗ ಮಟ್ಟದ ಇಲಾಖಾಧಿಕಾರಿಗಳು, ಅಧಿಕಾರಿಗಳು, ನೌಕರರು ಇದ್ದರು.