ಸುಂಟಿಕೊಪ್ಪ, ಜೂ. ೨೧: ಅಪಘಾತದಿಂದ ಗಾಯಗೊಂಡಿದ್ದ ನಾಯಿಯನ್ನು ಪೊಲೀಸರು ರಕ್ಷಿಸಿ ವೈದ್ಯರಿಂದ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಸುಂಟಿಕೊಪ್ಪದ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನ ಬೀದಿನಾಯಿಗೆ ಡಿಕ್ಕಿಪಡಿಸಿ ಪಲಾಯನಗೈದಿತ್ತು. ಅಪಘಾತಕ್ಕೀಡಾದ ಶ್ವಾನದ ಕಾಲಿನ ಮೂಳೆ ಮುರಿದು ನೋವಿನಿಂದ ನರಳುತ್ತಿತ್ತು. ಇದನ್ನು ಗಮನಿಸಿದ ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‌ಐ ಚೆನ್ನಯ್ಯ, ಸಿಬ್ಬಂದಿಗಳಾದ ಶಶಿಕುಮಾರ್ ಹಾಗೂ ರಮೇಶ್ ಬಿರಾದಾರ್ ಅವರು ಶ್ವಾನವನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.